ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದಿಂದ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ (ಇಂಜಿನಿಯರ್ಸ್‌ ಡೇ)ಯನ್ನು ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಗಣ್ಯರು ಪಷ್ಪಾರ್ಚನೆೆ ಮಾಡಿದರು. ವೆಂಕಟರಮಣಪ್ಪ, ಶ್ವೇತಾ, ವೇಣುಗೊಪಾಲ, ಅಕೀಬ್ ಜಾವಿದ್ ಮತ್ತಿತರರಿದ್ದರು. 
ಮಂಡ್ಯ

ಕೆಆರ್‌ಎಸ್‌ನಲ್ಲಿ ಕಾಯಕವೇ ನಮ್ಮ ಹೆಮ್ಮೆ

ಕೆ.ಆರ್.ಸಾಗರ: ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ (ಇಂಜಿನಿಯರ್ಸ್‌ ಡೇ)ಯನ್ನು ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯ ಮುಖ್ಯದ್ವಾರದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ ವಿವಿಧ ಪುಷ್ಪಗಳಿಂದ ಅಲಂಕೃತ ಪ್ರತಿಮೆಗೆ ಪೂಜೆ ಸಲ್ಲಿಸಿ,ಪಷ್ಪಾರ್ಚನೆೆ ಮಾಡಲಾಯಿತು.
ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ವೇತಾ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯ ನಿರ್ಮಿಸಿದ ಅನೇಕ ಯೋಜನೆಗಳು ನಮಗೆ ಮಾದರಿಯಾಗಿದ್ದು, ಅವರ ತಂತ್ರಜ್ಞಾನದ ಈ ಅಣೆಕಟ್ಟೆಯಲ್ಲಿ ನಾವು ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆ ಎನಿಸಿದ್ದು, ನಮಗೆಲ್ಲ ಅವರು ಮಾದರಿಯಾಗಿದ್ದು, ಇಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೂ ಇದು ಪ್ರೇರಣೆಯಾಗಿದೆ ಎಂದರು
ಕಾವೇರಿ ನೀರಾವರಿ ನಿಗಮ ಕೆ.ಆರ್.ಸಾಗರ ವಿಭಾಗದ ಸಹಾಯಕ ಇಂಜಿನಿಯರ್ ವೇಣುಗೋಪಾಲ್ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ದೂರ ದೃಷ್ಟಿಯುಳ್ಳವರಾಗಿದ್ದು, ಕಡು ಬಡತನದಿಂದ ವಿದ್ಯಾಭ್ಯಾಸ ಮುಗಿಸಿದ್ದರು. ನಂತರ ದೇಶದ ವಿವಿಧೆಡೆ ಕೆಲಸ ನಿರ್ವಹಿಸಿ ಮೆಚ್ಚುಗೆ ಪಡೆದರು. ಅವರು ಎಂದು ಸ್ವಾರ್ಥಕ್ಕೆ ಕೆಲಸ ಮಾಡಿದವರಲ್ಲ, ದೇಶದ ಅಭಿವೃದ್ಧಿಯ ಸಲುವಾಗಿ ದೇಶದ ವಿವಿಧೇಡೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದರು. ಅವರು ಸಿವಿಲ್ ಇಂಜಿನಿಯರ್ ಆಗಿದ್ದರೂ ಆರ್ಥಿಕ ತಜ್ಞರಂತೆ ಕೆಲಸ ನಿರ್ವಹಿಸಿದ್ದರು ಎಂದರು.
ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ತಾಂತ್ರಿಕ ಸಹಾಯಕರಾದ ಸುಮನಾ, ಇಂಜಿನಿಯರ್‌ಗಳು, ಸಿಬ್ಬಂದಿ ಸರ್.ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕೆ.ಆರ್.ಸಾಗರ ಕಾ.ನೀ.ನಿಗಮದ ಸಹಾಯಕ ಇಂಜಿನಿಯರ್‌ಗಳಾದ ವೇಣುಗೊಪಾಲ, ಅಕೀಬ್ ಜಾವಿದ್, ಶಿವಕುಮಾರ್, ಮಾನಸ, ಸಚಿನ್, ಲೆಕ್ಕ ಸಹಾಯಕ ನಾಗೇಶ್, ಎಫ್‌ಡಿಎ ಪ್ರಮೋದ್, ಎಸ್‌ಡಿಎ ಶಿವಕುಮಾರ್, ಪ್ರಮೋದ್, ಸಿಬ್ಬಂದಿ ಕೆಂಪರಾಜು, ಮ್ಯಾಥ್ಯೂ,ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಹಾಜರಿದ್ದರು.