ಬೆಳಗೊಳ ಗ್ರಾಮದ ವಾಗ್ದೇವಿ ಶಾಲೆಯಲ್ಲಿ ಶುಕ್ರವಾರ ಪಾಲಹಳ್ಳಿ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ ನಂದೀಶ್ ಹಾಗೂ ವಿದ್ಯಾರ್ಥಿನಿ ಜತೆಗೂಡಿ ಚಾಲನೆ ನೀಡಿದರು.
ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ವಾಗ್ದೇವಿ ಶಾಲೆಯಲ್ಲಿ ಶುಕ್ರವಾರ ಪಾಲಹಳ್ಳಿ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ನಂದೀಶ್ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯ ಜತೆಗೂಡಿ ದೀಪ ಬೆಳಗಿಸಿ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ನಂದೀಶ್ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಟಿ.ವಿ, ಮೊಬೈಲ್ ವ್ಯಾಮೋಹ ಹೆಚ್ಚಾಗಿದ್ದು, ಅವರು ಸಾಂಸ್ಕೃತಿ ಚಟುವಟಿಕೆಯಲ್ಲಿ ಭಾಗವಹಿಸುವಿಗೆ ಕಡಿಮೆಯಾಗುತ್ತಿದೆ, ಈ ಬಗ್ಗೆ ಪಾಲಕರು ಗಮನಹರಿಸಬೇಕು ಎಂದರು.
ಪುಟ್ಟ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಲಿದೆ. ಮಕ್ಕಳು ಬಹುಮಾನ ಪಡೆಯುವುದು ಮುಖ್ಯವಲ್ಲ, ಅವರ ಭಾಗವಹಿಸುವಿಕೆ ಪ್ರಮುಖವಾಗಲಿದೆ. ಸೋತವರು ಬೇಸರ ಪಡೆದೆ ಮುಂದಿನ ದಿನಗಳಲ್ಲಿ ಗೆಲ್ಲಲು ಶ್ರಮವಹಿಸಬೇಕು, ಪಾಲಕರು ಮಕ್ಕಳನ್ನು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತಗೊಳಿಸದೆ ಅವರು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು.
ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಸೇರಿದಂತೆ 24 ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು 16 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಪ್ರತಿ ಸ್ಪರ್ಧೆಗಳಿಗೆ ಬೇರೆ ಕ್ಲಸ್ಟರ್‌ನ ಶಿಕ್ಷಕರನ್ನು ತೀರ್ಪುಗಾರರನ್ನಾಗಿ ನಿಯೋಜನೆ ಮಾಡಲಾಗಿತ್ತು.
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಅಧಿಕಾರಿ ಡಾ.ಪ್ರಭಾ ಬಹುಮಾನ ವಿತರಿಸಿದರು.
ಇಆರ್‌ಸಿ ನಂಜುಂಡಾಚಾರಿ, ಬೆಳಗೊಳ ವಾಗ್ದೇವಿ ಶಾಲೆ ಮುಖ್ಯಸ್ಥೆ ವೀಣಾ, ಶ್ರೀರಂಗಪಟ್ಟಣ ತಾಲೂಕು ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಘವೇಂದ್ರ, ಬೆಳಗೊಳ ಗ್ರಾಮದ ಯಜಮಾನ ಶ್ರೀನಿವಾಸೇಗೌಡ, ಪಾಲಹಳ್ಳಿ ಕ್ಲಸ್ಟರ್ ಸಿಆರ್‌ಪಿ ಮೋಹನ್, ಗುರುಕುಲ ವಿದ್ಯಾಸಂಸ್ಥೆ ಮುಖ್ಯಶಿಕ್ಷಕ ಹರ್ಷ ಜೋಶಿ, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.