ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವ ಸಿಡಬ್ಲ್ಯುಆರ್‌ಸಿ ಆದೇಶ ಖಂಡಿಸಿ ರೈತ ಸಂಘದ ವತಿಯಿಂದ ಕೊಪ್ಪದಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ಮಾಡಲಾಯಿತು. ಕೀಳಘಟ್ಟ ನಂಜುಂಡಯ್ಯ, ಅರಗಿನಮೆಳೆ ರಾಮೇಗೌಡ, ಉಮೇಶ್, ತಿಮ್ಮೇಶ್, ಶಿವರಾಮು, ಲಿಂಗರಾಜು, ಚನ್ನೇಗೌಡ, ಮಂಜು, ಜಗ್ಗ ಸೇರಿದಂತೆ ಇತರರು ಇದ್ದರು. 
ಮಂಡ್ಯ

ಕೊಪ್ಪ ಬಂದ್ ಯಶಸ್ವಿ

ಎಂ.ರವಿ

ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವ ಸಿಡಬ್ಲ್ಯುಆರ್‌ಸಿ ಆದೇಶ ಖಂಡಿಸಿ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಗುರುವಾರ ಕರೆದಿದ್ದ ಕೊಪ್ಪ ಬಂದ್ ಶಾಂತಿಯುತವಾಗಿ ಸಂಪೂರ್ಣ ಯಶಸ್ವಿಯಾಯಿತು.

ರೈತ ಸಂಘದ ವತಿಯಿಂದ ಕೊಪ್ಪದಲ್ಲಿ ಮದ್ದೂರು-ನಾಗಮಂಗಲ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು ಹಾಗೂ ಅಡುಗೆ ಮಾಡಿ ಪ್ರತಿಭಟನಕಾರರಿಗೆ ಊಣ ಉಣಬಡಿಸಲಾಯಿತು. ಬಂದ್ ಹಿನ್ನೆಲೆಯಲ್ಲಿ ಕೊಪ್ಪ ಸಂಪೂರ್ಣ ಸ್ಥಬ್ಧಗೊಂಡಿತ್ತು.
ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ, ಅರಗಿನಮೆಳೆ ರಾಮೇಗೌಡ, ಉಮೇಶ್, ತಿಮ್ಮೇಶ್, ಶಿವರಾಮು, ಲಿಂಗರಾಜು, ಚನ್ನೇಗೌಡ, ಮಹದಮ್ ಇಲಿಯಾಜ್, ಮಂಜು, ಜಗ್ಗ ಸೇರಿದಂತೆ ಇತರರು ಇದ್ದರು.