ಮದ್ದೂರು ತಾಲೂಕಿನ ಹಳ್ಳಿಕೆರೆ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಕೆ.ಎಲ್.ರವಿ ಅಧ್ಯಕ್ಷರಾಗಿ ಹಾಗೂ ನಾಗರತ್ನಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕೂಳಗೆರೆ ಶೇಖರ್, ಪುಟ್ಟಸ್ವಾಮಿಗೌಡ, ಎಚ್.ಟಿ.ರಾಮಚಂದ್ರಯ್ಯ, ಕೃಷ್ಣ, ಬಸವರಾಜು, ಪವಿತ್ರ, ರಾಜು, ರುದ್ರಪ್ಪ, ಲಿಂಗೇಗೌಡ ಇದ್ದರು.
ಮದ್ದೂರು: ತಾಲೂಕಿನ ಹಳ್ಳಿಕೆರೆ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಅಧ್ಯಕ್ಷರಾಗಿ ಎನ್‌ಡಿಎ ಮೈತ್ರಿ ಕೂಟದ ಬೆಂಬಲಿತರಾದ ಕೆ.ಎಲ್.ರವಿ ಹಾಗೂ ಉಪಾಧ್ಯಕ್ಷರಾಗಿ ನಾಗರತ್ನಮ್ಮ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಸಂಭಾಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎಲ್.ರವಿ, ಉಪಾಧ್ಯಕ್ಷ ಸ್ಥಾನಕ್ಕೆ ನಾಗರತ್ನಮ್ಮ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಆಶಾ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಕೆ.ಎಲ್.ರವಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಂಘದ ನಿರ್ದೇಶಕರು, ಷೇರುದಾರ ವಿಶ್ವಾಸ ಪಡೆದು ಸಂಘವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಘದಲ್ಲಿ ಸುಮಾರು 585 ಷೇರುದಾರರಿದ್ದು, ವಾರ್ಷಿಕವಾಗಿ 3 ಕೋಟಿ ರೂ., ವ್ಯವಹಾರ ನಡೆಯುತ್ತಿದೆ. ಷೇರುದಾರಿಗೆ ಬೆಳೆ ಸಾಲ, ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಸಾಲ, ರೇಷ್ಮೆ ಮನೆ ಕಟ್ಟಲು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮುಖಂಡ ಕೂಳಗೆರ ಶೇಖರ್, ಸಂಘದ ನಿರ್ದೇಶಕರಾದ ಪುಟ್ಟಸ್ವಾಮಿಗೌಡ, ಎಚ್.ಟಿ.ರಾಮಚಂದ್ರಯ್ಯ, ಕೃಷ್ಣ, ಬಸವರಾಜು, ಪವಿತ್ರ, ರಾಜು, ಕಾರ್ಯದರ್ಶಿ ರುದ್ರಪ್ಪ, ಸಹಾಯಕ ಎಚ್.ಎಸ್.ಲಿಂಗೇಗೌಡ ಸೇರಿದಂತೆ ಇತರರು ಇದ್ದರು.