ಕಿಕ್ಕೇರಿಯವರಾದ ಕಿಕ್ಕೇರಿ ಲಿಖಿತ್ ಕೃಷ್ಣ ಅವರು ಈಚೆಗೆ ಬೆಂಗಳೂರಿನಲ್ಲಿ ಕೆ.ಎಸ್.ನ. ಟ್ರಸ್ಟ್ ಹಮ್ಮಿಕೊಂಡಿದ್ದ ಕೆ.ಎಸ್.ನ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಎಸ್.ನ. ಗೀತೆಗಳ ನೃತ್ಯಗಳಿಗೆ ನೃತ್ಯ ನಿರ್ದೇಶನ ನೀಡಿ ರಂಜಿಸಿದರು.
ಕಿಕ್ಕೇರಿಯವರಾದ ಕಿಕ್ಕೇರಿ ಲಿಖಿತ್ ಕೃಷ್ಣ ಇತ್ತೀಚೆಗೆ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಬೆಂಗಳೂರಿನಲ್ಲಿ ಸಾಹಿತಿ, ಕವಿಗಳಿಗೆ ಹಮ್ಮಿಕೊಂಡಿದ್ದ ಕೆ.ಎಸ್.ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಎಸ್. ನರಸಿಂಹಸ್ವಾಮಿ ವಿರಚಿತ ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು... ಮತ್ತಿತರ ಗೀತೆಗೆ ಕೊರಿಯೋಗ್ರಾಫರ್(ನೃತ್ಯ ನಿರ್ದೇಶನ) ನೀಡಿದ್ದು ಮಕ್ಕಳು ಸುಂದರ ನೃತ್ಯರೂಪಕಗಳನ್ನು ಸಾದರಪಡಿಸಿ ಪ್ರೇಕ್ಷಕರ ಮನಗೆದ್ದರು.
ಲಿಖಿತ್ ಕೃಷ್ಣ ಎಂ.ಟೆಕ್ ಪದವೀಧರರಾಗಿ, ಕಲಾವಿದರಾಗಿ ಹಾಗೂ ಬೆಂಗಳೂರಿನ ಗ್ಲೋಬಲ್ ಅಕಾಡೆಮಿಯಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗೀತೆ ನೃತ್ಯರೂಪಕದಲ್ಲಿ ಲಿಖಿತ್ ಕೃಷ್ಣ ಅವರ ನಿರ್ದೇಶನದಂತೆ ಪುಟಾಣಿ ಮಕ್ಕಳು ವೈವಿಧ್ಯಮಯವಾಗಿ ಅಭಿನಯ ಪ್ರದರ್ಶಿಸಿ ಕಿಕ್ಕೇರಿಯ ಪ್ರೇಮಕವಿ ಕೆ.ಎಸ್.ನ. ಅವರಿಗೆ ನೃತ್ಯ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಬಿ.ಎಸ್. ಮಂಜುನಾಥಸ್ವಾಮಿ, ಸದಸ್ಯ ಕಾರ್ಯದರ್ಶಿ ಬಿ.ವಿ. ನಂದೀಶ್ ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಮು, ಕವಿ ಬಿ.ಆರ್. ಲಕ್ಷ್ಮಣರಾವ್, ಕೆ.ಎಸ್.ನ. ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಮತ್ತಿತರರಿದ್ದರು.