ಕಿಕ್ಕೇರಿ ಹೋಬಳಿಯ ದಬ್ಬೇಘಟ್ಟ ಗ್ರಾಪಂನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಿಮ ಗ್ರಾಮಸಭೆಯಲ್ಲಿ ಅಧ್ಯಕ್ಷ ದೇವರಾಜು ಮಾತನಾಡಿದರು. ಚಲುವರಾಜು, ಉಮಾಶಂಕರ್, ಸದಸ್ಯರು ಹಾಜರಿದ್ದರು.  
ಮಂಡ್ಯ

ಸನ್ಮಾನದೊಂದಿಗೆ ಮುಗಿದ ದಬ್ಬೇಘಟ್ಟ ಗ್ರಾಪಂ ಸಭೆ

ಕಿಕ್ಕೇರಿ: ಹೋಬಳಿಯ ಗಡಿಭಾಗದ ದಬ್ಬೇಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಮಸಭೆ ಹೃದಯಸ್ಪರ್ಶಿ ಸನ್ಮಾನದೊಂದಿಗೆ ಮುಕ್ತಾಯವಾಯಿತು.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅವಧಿ ಮುಗಿಯುತ್ತ ಬಂದ ಕಾರಣ ಏರ್ಪಡಿಸಿದ್ದ ಅಂತಿಮ ಗ್ರಾಮಸಭೆಯಲ್ಲಿ ಪರಸ್ಪರ ಸದಸ್ಯರು ತಮ್ಮ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳ ಕುರಿತು ಚರ್ಚಿಸಿದರು. ಮುಂದಿನ ಚುನಾವಣೆಯಲ್ಲಿ ತಾವುಗಳು ಗ್ರಾಪಂ ಸದಸ್ಯರಾಗಿ ಮುಂದುವರಿಯಬೇಕು ಎನ್ನುವ ಆಸೆ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷ ದೇವರಾಜು ಮಾತನಾಡಿ, ಗ್ರಾಪಂ ಸದಸ್ಯರು, ಆಡಳಿತ ಅಧಿಕಾರಿಗಳು, ಸಿಬ್ಬಂದಿ ತಮ್ಮ ಅಧ್ಯಕ್ಷ ಅವಧಿಯಲ್ಲಿ ನೀಡಿದ ಸಹಕಾರವನ್ನು ಸ್ಮರಿಸಿದರು. ತಮ್ಮ ಅಧಿಕಾರ ಅವಧಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಮಾಡಿರುವ ಉಪಯೋಗ, ಸಹಕಾರವನ್ನು ಗ್ರಾಮಸ್ಥರು ಮರೆಯಲಾರರು. ಗ್ರಾಮಸ್ಥರು ಮುಂದಿನ ದಿನದಲ್ಲಿ ತಮಗೆ ನೀಡುವ ಆಶೀರ್ವಾದ ಇದಾಗಿರಲಿದೆ ಎಂದರು.
ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಪಂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷೆ ಕುಮಾರಿ, ಕುಮಾರಸ್ವಾಮಿ, ಲೋಕೇಶ್, ಪುಟ್ಟೇಗೌಡ, ಚನ್ನೇಗೌಡ, ಶಿವಕುಮಾರ್, ಕುಮಾರ್, ನಾಗರಾಜೇಗೌಡ, ವಿನೋದಿನಿ, ಅನಿತಾ, ಇಂದ್ರಮ್ಮ, ತಾಯಮ್ಮ, ಮಣಿಯಮ್ಮ, ಅಶ್ವಿನಿ, ವಿಶಾಲಾಕ್ಷಿ, ನಾಗಮ್ಮ, ಮಂಜಮ್ಮ, ಪಿಡಿಒ ಚಲುವರಾಜು, ಉಮಾಶಂಕರ್, ಕಾರ್ಯದರ್ಶಿ ಮಧುಕರ್ ಮತ್ತಿತರರಿದ್ದರು.