ಪಾಂಡವಪುರ ತಾಲೂಕು ಚಿಕ್ಕಮರಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು. 
ಮಂಡ್ಯ

ಚಿಕ್ಕಮರಳಿಯಲ್ಲಿ ಕೆಂಪೇಗೌಡ ಜಯಂತಿ

ಲಲಾಟಾಕ್ಷ ಎಸ್
ಪಾಂಡವಪುರ: ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಗ್ರಾಮದ ಶ್ರೀ ಬೋರೇದೇವರು ದೇವಸ್ಥಾನದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಗ್ರಾಪಂ ಮಾಜಿ ಅಧ್ಯಕ್ಷ ಸಿ.ಬಿ.ತಮ್ಮಣ್ಣ, ಮಾಜಿ ಸದಸ್ಯೆ ನೀಲಮ್ಮ, ಮುಖಂಡರಾದ ಪ್ರಕಾಶ್, ಅವಿನಾಶ್, ಮಧುಸೂದನ್, ಉಮೇಶ್, ಸುರೇಶ್, ಸಿ.ಬಿ.ಶಂಕರ್, ಚೇತನ್, ಲೋಕೇಶ್, ದೊಡ್ಡಬೋರೇಗೌಡ, ಅಂಗಡಿಶಂಕರ, ವರುಣ್, ಅರುಣ್, ಸುದೀಪ್, ಮಂಜು ಇದ್ದರು.