ಮದ್ದೂರು ನಗರದ ಪ್ರವಾಸಿ ಮಂದಿರದ ಬಳಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಹುತ್ಮಾತರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಾಗಣ್ಣ, ಎಚ್.ಎಸ್.ನಾಗೇಶ್, ಸುರೇಶ್, ಅನುಜಿತ್, ಸುರೇಶ್, ಕೃಷ್ಣ, ನಟರಾಜು, ಮಹೇಶ್, ಮನು, ಪ್ರವೀಣ್ ಇದ್ದರು. 
ಮಂಡ್ಯ

ಯೋಧ, ರೈತ ದೇಶದ ನಿಜವಾದ ಮುತ್ತುಗಳು

ನಾಗೇಶ ಎಸ್
ಮದ್ದೂರು: ಕಾರ್ಗಿಲ್ ವಿಜಯ ದಿವಸವನ್ನು ಪ್ರತಿವರ್ಷ ಜು.26 ರಂದು ಆಚರಿಸಲಾಗುತ್ತದೆ. ಇದು 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ನುಸುಳುಕೋರರನ್ನು ಸೋಲಿಸಿ ಭಾರತ ಸಾಧಿಸಿದ ಐತಿಹಾಸಿಕ ವಿಜಯದ ಸಂಸ್ಮರಣೆಯಾಗಿದೆೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಬಳಿ ಭಾನುವಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಹುತ್ಮಾತರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಾರ್ವಜನಿಕರಿಗೆ ಸಿಹಿ ಹಂಚಿ ಮಾತನಾಡಿದರು.
1999ರ ಮೇ-ಜುಲೈ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಭಾರತೀಯ ಸೇನೆಯು ನಡೆಸಿದ ಕಾರ್ಯಾಚರಣೆಯಾಗಿದ್ದು, ಸುಮಾರು ಎರಡು ತಿಂಗಳ ಕಾಲ ನಡೆದ ಕಠಿಣ ಯುದ್ಧದ ಬಳಿಕ ಜು.26ರಂದು ಭಾರತೀಯ ಸೈನಿಕರು ವಿಜಯ ಸಾಧಿಸಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಶೌರ್ಯ ಮತ್ತು ತ್ಯಾಗವನ್ನು ಪ್ರತಿನಿತ್ಯ ಸ್ಮರಿಸಲು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ದೇಶ ಕಾಯುವ ಯೋಧ, ಅನ್ನ ನೀಡುವ ರೈತ ಇಬ್ಬರೂ ದೇಶದ ನಿಜವಾದ ಮುತ್ತುಗಳು ಎಂದು ಬಣ್ಣಿಸಿದರು.
ಜೈ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಚ್.ಎಸ್.ನಾಗೇಶ್, ಮಾಜಿ ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಸುರೇಶ್, ಸಮಾಜ ಸೇವಕ ನಟರಾಜು, ಸಂಘಟನೆಯ ಮುಖಂಡರಾದ ಮಹೇಶ್, ಮನು, ಪ್ರವೀಣ್, ದರ್ಶನ್, ಅನುಜಿತ್, ಸುರೇಶ್, ಕೃಷ್ಣ ಇತರರು ಇದ್ದರು.