ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
- ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
- ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ
ಮಂಡ್ಯ: ಜಿಲ್ಲೆಯನ್ನು ಬರಪೀಡಿತವೆಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಪತ್ರ ರವಾನಿಸಿದರು.
ಜಿಲ್ಲೆಯಲ್ಲಿ ಶೇ.60ರಷ್ಟು ಬೆಳೆಗಳು ಬೆಳೆದು ನಿಂತಿದೆ. ಕಬ್ಬು, ಭತ್ತ ಮತ್ತು ವಿವಿಧ ಹಣ್ಣು, ತರಕಾರಿ, ತೋಟಗಾರಿಕೆ ಬೆಳೆಗಳಿವೆ. ಆದರೆ ಮಳೆಯಾಗದೇ ಎಲ್ಲ ಬೆಳೆ ಒಣಗಿ ಹೋಗುತ್ತಿವೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಕಾರ್ಯ ಕುಂಠಿತವಾಗಿದೆ. ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಜಿಲ್ಲೆಯನ್ನು ಬರಪೀಡಿತವೆಂದು ಘೋಷಣೆ ಮಾಡಬೇಕು. ಅದರಂತೆ ಪ್ರತಿ ಎಕರೆಗೆ 50 ಸಾವಿರ ರೂ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಎಸ್.ಚಿದಂಬರ್, ಮಹಿಳಾಧ್ಯಕ್ಷೆ ಸಿ.ಸುಜಾತಾಕೃಷ್ಣ, ಪುಟ್ಟಮಲ್ಲಯ್ಯ, ಸರಸ್ವತಿ, ತೇಜುಕುಮಾರ್, ಯಶ್ವಂತ್, ಎಂ.ಪಿ.ಸ್ವಾಮಿ, ಸ್ವಾಮಿಗೌಡ, ಎಚ್.ಎಲ್.ಲೀಲಾ, ಉದಯ್, ರವೀಂದ್ರ, ಎಂ.ಜಿ.ಕಾಂತರಾಜು, ಗಿರಿಕುಮಾರ್, ಚೇತನ್‌ಕುಮಾರ್, ಚನ್ನೇಗೌಡ, ಮಹದೇವ, ಪ್ರಕಾಶ್, ಯೋಗಾನಂದ, ಯಶ್ವಂತ್, ನಜೀರ್, ದೇವರಾಜ, ರಾಧಾ, ವಸಂತಾ, ಶೀಲಾ, ಶೋಭಾ ಇತರರಿದ್ದರು.