ಮದ್ದೂರು : ಜನಸಾಮಾನ್ಯರ ಧ್ವನಿಯಾಗಿ ನಾಡು ನುಡಿಗೆ ಕೆಲಸ ಮಾಡಲು ಬಲಿಷ್ಠ ಸಂಘಟನೆಗಳನ್ನು ಕಟ್ಟಿ ಬೆಳೆಸಬೇಕು ಎಂದು ಜೈ ಕರ್ನಾಟಕ ಪರಿಷತ್ತಿನ ತಾಲೂಕು ಅಧ್ಯಕ್ಷ ಬಿ. ಪುಟ್ಟಸ್ವಾಮಿ ತಿಳಿಸಿದರು.ನಗರದ ಟಿ.ಬಿ. ವೃತ್ತದ ಬಳಿಯ ಸಂಜಯ್ ಚಿತ್ರಮಂದಿರದ ಎದುರು ಜೈ ಕರ್ನಾಟಕ ಪರಿಷತ್ತಿನ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ‘ವಾರ್ಡ್ಗಳ ಕಾರ್ಯಕಾರಿ ಸದಸ್ಯರ ಸೇರ್ಪಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ, ಆರೋಗ್ಯ, ಶಿಕ್ಷಣ, ಕ್ರೀಡೆ ಹಾಗೂ ಕಲೆ ಸೇರಿದಂತೆ ಸಮಾಜದ ಬಹುಮುಖ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡುವ ಸಂಸ್ಥೆಗಳ ಅಗತ್ಯವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗಳಿಗೆ ಕೈಜೋಡಿಸಬೇಕು ಎಂದರು. ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಎಸ್. ನಾರಾಯಣ್
ಮಾತನಾಡಿ, ಮದ್ದೂರು ನಗರದ ಎಲ್ಲಾ ವಾರ್ಡ್ಗಳಿಗೆ ಹಾಗೂ ಗ್ರಾಮೀಣ ಭಾಗಗಳಿಗೆ ಅಧ್ಯಕ್ಷರು, ಮಹಿಳಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನವೆಂಬರ್ ಅಂತ್ಯದ ಒಳಗೆ ಆಯ್ಕೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು. ಶಾಖಾಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, ಮದ್ದೂರು ತಾಲ್ಲೂಕಿನಲ್ಲಿ ಪರಿಷತ್ತನ್ನು ತಳಮಟ್ಟದಿಂದ ಬಲಪಡಿಸಲು ನಾವು ಸದಾ ಸಿದ್ಧರಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೆಂಕಟೇಶ ಮೂರ್ತಿ ಮಾತನಾಡಿ, ಮೂರು ದಶಕಗಳ ಸುದೀರ್ಘ ಸಾಮಾಜಿಕ ಹೋರಾಟದ ಅನುಭವ ಹೊಂದಿರುವ ಡಾ. ನಾರಾಯಣ್ ಅವರ ಮಾರ್ಗದರ್ಶನ ಸಂಘಟಕರಿಗೆ ಅತ್ಯಗತ್ಯವಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಸಂಘಟನೆಯನ್ನು ಮುನ್ನಡೆಸೋಣ ಎಂದರು. ಮುಖಂಡರಾದ ಎಂ. ಪುಟ್ಟಸ್ವಾಮಿ, ಕೆ.ಎಂ. ರಾಮಕೃಷ್ಣ, ರಾಮೇಗೌಡ, ಪಿ. ಕೃಷ್ಣಮೂರ್ತಿ, ಲಿಂಗೇಗೌಡ, ದೇವರಾಜೇಗೌಡ, ಎಸ್. ರುದ್ರಯ್ಯ, ಪುಟ್ಟಸ್ವಾಮಿ ಕೆ.ಬಿ., ಶಿವಣ್ಣ ಸೇರಿದಂತೆ ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.