ಕೆ.ಆರ್.ಸಾಗರದ ರೈಲು ನಿಲ್ದಾಣದ ಬಳಿ ನಡೆಯುತ್ತಿರುವ ಉಪ್ಪರಿಕೆ ಶ್ರೀ ಬಸವೇಶ್ವರ ದನಗಳ ಜಾತ್ರೆ. 
ಮಂಡ್ಯ

ಕಳೆಕಟ್ಟಿದ ಉಪ್ಪರಿಕೆ ಶ್ರೀ ಬಸವೇಶ್ವರ ದನಗಳ ಜಾತ್ರೆ

ಕೆ.ಆರ್.ಸಾಗರ: ಇಲ್ಲಿನ ರೈಲು ನಿಲ್ದಾಣದ ಬಳಿ ಸಂಕ್ರಾತಿ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಉಪ್ಪರಿಕೆ ಶ್ರೀ ಬಸವೇಶ್ವರ ದನಗಳ ಜಾತ್ರೆ ದಿನದಿಂದ ದಿನಕ್ಕೆ ಬರುತ್ತಿರುವ ದನಗಳ ಸಂಖ್ಯೆ ಹೆಚ್ಚುತ್ತಿದೆ.
ಇತ್ತೀಚಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಹಲವು ವರ್ಷಗಳ ನಂತರ ಈ ಬಾರಿ ದನಗಳು ಸೇರಿದ್ದು ಆಕರ್ಷಣೆಯಾಗುತ್ತಿದೆ. ಉಪ್ಪರಿಕೆ ಬಸವೇಶ್ವರ ದೇವರ ದರ್ಶನ ಮಾಡಲು ಕೂಡ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಂದ ನೂರಾರು ದನಗಳ ಜೋಡಿಗಳನ್ನು ಜಾತ್ರೆ ಮಾಳದಲ್ಲಿ ಕಟ್ಟುತ್ತಿದ್ದು, ದನಗಗಳಿಗೆ ಯಾವುದೇ ತೊಂದರೆಯಾಗದಿರಲೆಂದು ದನಗಳ ಮಾಲೀಕರೆ ಶಾಮಿಯಾನ ಹಾಕುತ್ತಿದ್ದಾರೆ. ಇನ್ನು ಕೆಲವರು ದನಗಳು ಮಲಗಲು ಭತ್ತದ ಹೊಟ್ಟನ್ನು ನೆಲಕ್ಕೆ ಹಾಕಿದ್ದರು.
ಜಾತ್ರೆ ಪ್ರಯುಕ್ತ ಕಡಲೆಪುರಿ ಸೇರಿದಂತೆ ತಿಂಡಿ ತಿನಿಸುಗಳ ವ್ಯಾಪಾರ ಕೂಡ ಜೋರಾಗಿದ್ದು, ದೇವರ ದರ್ಶನಕ್ಕೆ ನಿತ್ಯ ನೂರಾರು ಭಕ್ತರು ಭೇಟಿ ನೀಡಿ, ನಂತರ ದನಗಳ ಜಾತ್ರೆ ವೀಕ್ಷಿಸಿ ಮಾಲೀಕರಿಂದ ದನಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಕೆಲವರು ದನಗಳ ಭರ್ಜರಿ ವ್ಯಾಪಾರ ಮಾಡುತ್ತಿದ್ದರು. ಪಶು ಇಲಾಖೆ ಉಪನಿರ್ದೇಶಕರು ಜಾತ್ರೆಗೆ ಭೇಟಿ ನೀಡಿ ದನಗಳ ಆರೋಗ್ಯ ವಿಚಾರಣೆ ಮಾಡಿದರು.