ಮದ್ದೂರು ನಗರದ ವೆಂಕಟೇಶ್ವರ ಕನ್‌ವೆನ್ಷನ್ ಹಾಲ್‌ನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದ ವೇಳೆ ನೂತನ ಪದಾಕಾರಿಗಳಿಗೆ ಶಾಸಕ ದಿನೇಶ್ ಗೂಳೀಗೌಡ ಅಕಾರ ಹಸ್ತಾಂತರಿಸಿದರು. ಕೆ.ಎಂ.ಉದಯ್, ಮತ್ತೀಕೆರೆ ಜಯರಾಮ್, ಸೋಮಶೇಖರ್ ಕೆರಗೋಡು, ಕೆ.ಸಿ.ಮಂಜುನಾಥ್, ರವಿಸಾವಂದಿಪುರ, ಶಶಿಧರ್ ಕಾಡುಕೊತ್ತನಹಳ್ಳಿ, ಎಸ್.ಪುಟ್ಟಸ್ವಾಮಿ ಇದ್ದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಹೇಳಿಕೆ
ಮದ್ದೂರು: ರಾಜ್ಯ ಸರ್ಕಾರ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿರುವ ಜತೆಗೆ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದರು.
ನಗರದ ಹಳೇ ಬಸ್ ನಿಲ್ದಾಣದ ಬಳಿಯಿರುವ ಶ್ರೀ ವೆಂಕಟೇಶ್ವರ ಕನ್‌ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಘಟಕ ಆಯೋಜಿಸಿದ್ದ ನೂತನ ಪದಾಕಾರಿಗಳ ಪದಗ್ರಹಣ ಕಾರ್ಯಕ್ರಮದ ವೇಳೆ ನೂತನ ಪದಾಕಾರಿಗಳಿಗೆ ಅಕಾರ ಹಸ್ತಾಂತರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರಕರ್ತರ ಹಲವು ಯೋಜನೆಗಳನ್ನು ಜಾರಿಗೊಳಿಸುವ ಜತೆಗೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು ಈಗಾಗಲೇ ನೋಂದಣಿ ಪ್ರಕ್ರಿಯೆ ಜಾಲ್ತಿಯಲ್ಲಿದ್ದು ನಮ್ಮ ಸರ್ಕಾರ ಅಕಾರಕ್ಕೆ ಬಂದ ಮೇಲೆ ಪತ್ರಕರ್ತರ ಮಾಸಾಶನವನ್ನು 10 ಸಾವಿರದಿಂದ 15 ಸಾವಿರ ರೂ.ಗಳನ್ನು ಹೆಚ್ಚಳ ಮಾಡಿರುವುದಾಗಿ ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಎಂ.ಉದಯ್, ಪತ್ರಕರ್ತರು ಯಾವಾಗಲೂ ರಾಜಕಾರಣಿ ಮತ್ತು ಅಕಾರಿಗಳನ್ನು ಬಡಿದೆಬ್ಬಿಸುವ ಮೂಲಕ ಸಮಾಜದ ಅಭ್ಯುದ್ಯಯಕ್ಕೆ ನಿರಂತರವಾಗಿ ಶ್ರಮಿಸಬೇಕಾಗಿದ್ದು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಸೇರಿದಂತೆ ನಾಲ್ಕನೇ ಅಂಗವಾದ ಪತ್ರಿಕಾ ರಂಗಕ್ಕೂ ತಮ್ಮದೇ ಆದ ವೌಲ್ಯವಿದ್ದು ವೌಲ್ಯಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.
ಅಭಿನಂದನೆ: ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಂ.ಉದಯ್, ದಿನೇಶ್ ಗೂಳೀಗೌಡ ಹಾಗೂ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ರವರನ್ನು ತಾಲೂಕು ಸಂಘದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಅಕಾರ ಹಸ್ತಾಂತರ: ನೂತನ ಪದಾಕಾರಿಗಳಾದ ಶಿವನಂಜಯ್ಯ(ಅಧ್ಯಕ್ಷ), ಸಿ.ಹರೀಶ್(ಉಪಾಧ್ಯಕ್ಷ), ಎಂ.ಆರ್.ಚಕ್ರಪಾಣಿ(ಪ್ರಧಾನ ಕಾರ್ಯದರ್ಶಿ), ಪಿ.ನಂದೀಶ್(ಖಜಾಂಚಿ) ಹಾಗೂ ಎಂ.ಪಿ.ವೆಂಕಟೇಶ್(ಕಾರ್ಯದರ್ಶಿ) ರವರುಗಳಿಗೆ ನಿರ್ಗಮಿತ ಅಧ್ಯಕ್ಷ ಎಂ.ಆರ್.ಚಕ್ರಪಾಣಿ ಅವರಿಂದ ಶಾಸಕ ದಿನೇಶ್ ಗೂಳೀಗೌಡ ಅಕಾರ ಹಸ್ತಾಂತರಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಂ ಪ್ರಾಸ್ತಾವಿಕ ನುಡಿಗಳನ್ನಾಡಿದರಲ್ಲದೆ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಮಂಡ್ಯ ನಗರಾಭಿವೃದ್ಧಿ ಅಧ್ಯಕ್ಷ ಬಿ.ಪಿ.ಪ್ರಕಾಶ್ ಕಾರ್ಯಕ್ರಮ ಕುರಿತು ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷರಾದ ಕೆ.ಸಿ.ಮಂಜುನಾಥ್, ರವಿ ಸಾವಂದಿಪುರ, ಪ್ರಧಾನ ಕಾರ್ಯದರ್ಶಿ ಶಶಿಧರ್ ಕಾಡುಕೊತ್ತನಹಳ್ಳಿ, ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಎನ್.ಶಿವಪ್ರಕಾಶ್, ಜಿಲ್ಲಾ ನಿರ್ದೇಶಕ ಪುಟ್ಟಸ್ವಾಮಿ, ತಾಲೂಕು ಘಟಕದ ನಿರ್ದೇಶಕರಾದ ಎಸ್.ಕೆ.ಸುಂದರ್‌ರಾಜ್, ಎಚ್.ಜಿ.ರವಿಕುಮಾರ್, ಅಣ್ಣೂರು ಸತೀಶ್, ಎಂ.ಆರ್.ಅಶೋಕ್‌ಕುಮಾರ್, ನಾಗರಾಜು, ವಿ.ಎಸ್.ಪ್ರಭು, ಕೆ.ಎಸ್.ಸುನೀಲ್‌ಕುಮಾರ್, ಕೃಷ್ಣ, ನಾಗಮ್ಮ ಇತರರಿದ್ದರು.