ಮಳವಳ್ಳಿ ಭಗವಾನ್ ಬುದ್ಧ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಮನೋರಖಿತ ಬಂತೇಜಿ, ಯಮದೂರು ಸಿದ್ದರಾಜು, ವಿವೇಕಾನಂದ, ರಘು, ಇಂದ್ರೇಶ್, ಅಶೋಕ್ ಜಯರಾಮ್, ಚೇತನ್ ಕುಮಾರ್ ಇದ್ದರು.
- ಸಂಸದ ಯದುವೀರ್ ಮನವಿ
- ಸಸಿ ನೆಡುವ ಕಾರ್ಯಕ್ರಮ
ಮಳವಳ್ಳಿ: ಮೈಸೂರು ಅರಸರ ಕಾಲದ ಸುವರ್ಣ ಯುಗದತ್ತ ಭಾರತವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿರುವ ಸಂಕಲ್ಪ ಭಾರತ ಯೋಜನೆಗಳು ಅತ್ಯಂತ ಅಮೂಲ್ಯವಾಗಿವೆ. ಈ ಯೋಜನೆಗಳ ಯಶಸ್ಸಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದರು.
ಪಟ್ಟಣದ ಭಗವಾನ್ ಬುದ್ಧ ಸಾಮಾಜಿಕ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ್ದ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಯೋಜನೆಗಳು ಜಾರಿಯಾದ ತಕ್ಷಣ ಫಲ ನೀಡಬೇಕು ಎಂದು ಬಯಸುವುದು ಸರಿಯಲ್ಲ. ಸ್ವಲ್ಪ ಸಮಯ ಹಿಡಿಯುತ್ತದೆ. ಅಲ್ಲಿವರೆಗೆ ಕಾಯುವ ತಾಳ್ಮೆ ಇರಬೇಕು ಎಂದರು.
ಮೈಸೂರು ಸಂಸ್ಥಾನದಲ್ಲಿ ಆಡಳಿತ ನಡೆಸಿದ ನಮ್ಮ ಹಿರಿಯರು ಸಮ ಸಮಾಜದ ನಿರ್ಮಾಣಕ್ಕಾಗಿ ಅಂದು ಕೈಗೊಂಡ ಕಾರ್ಯಗಳು ಈಗಲೂ ಸಾರ್ವಜನಿಕರಿಗೆ ಅನುಕೂಲವಾಗುತ್ತಿವೆ. ಹಾಗಾಗಿ ಕೇಂದ್ರ ಸರ್ಕಾರ ಜನಹಿತಕ್ಕಾಗಿ ಜಾರಿಗೊಳಿಸಿರುವ ಯೋಜನೆಗಳು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ ಎಂದರು.
ಭಗವಾನ್ ಬುದ್ಧರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಗ್ರಾಮೀಣ ಭಾಗದ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸಿ ಆ ಕುಟುಂಬಗಳ ಬದುಕಿನ ಬೆಳಕಾಗಿರುವ ಯಮದೂರು ಸಿದ್ದರಾಜು ಅವರ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಮನೋರಖಿತ ಬಂತೇಜಿ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು, ಜಿಲ್ಲಾಧ್ಯಕ್ಷ ಡಾ.ಎನ್.ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಮ್, ಕಸಪಾ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಚಲನಚಿತ್ರ ನಟ ಅಖಿಲೇಶ್, ಶೈಲೇಂದ್ರ, ಜನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ ಇತರರು ಇದ್ದರು.