crime 
ಮಂಡ್ಯ

ಆಭರಣ ಕಳವು ಮಾಡುತ್ತಿದ್ದವನ ಬಂಧನ

ಹಲಗೂರು: ಕೂಲಿ ಕೆಲಸಕ್ಕೆ ಬಂದಿದ್ದ ವೃದ್ಧ ಮಹಿಳೆ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ
ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸಮೀಪದ ಶಾಗ್ಯ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಶಿವಾರ ಗ್ರಾಮದ ಹೊಂಬಾಳಯ್ಯ ಎಂಬಾತ ಬಾಲಕನೊಬ್ಬನನ್ನು ಬೈಕಿನಲ್ಲಿ ಕೂರಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ಕುಳಿತಿದ್ದ ಮಹಿಳೆ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ. ಆಕೆ ಕೂಗಾಡಿದಾಗ ಗ್ರಾಮಸ್ಥರು ಆರೋಪಿಗಳ ಬೆನ್ನತ್ತಿ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.