ಜೆಡಿಎಸ್ ಶಾಸಕ ಎಚ್.ಟಿ.ಮಂಜು 
ಮಂಡ್ಯ

ಜೆಡಿಎಸ್ ಶಾಸಕನಿಂದ ಆತ್ಮಹ* ಮಾಡಿಕೊಳ್ಳುವ ಮಾತು: ಇಷ್ಟೊಂದು ಅಸಮಾಧಾನಕ್ಕೆ ಕಾರಣವೇನು? JDS MLA unhappy

ಪ್ರಮುಖ ಮುಖ್ಯಾಂಶಗಳು

  • ಎಂಡಿಸಿಸಿ ಬ್ಯಾಂಕ್ ಚುನಾವಣೆ
  • ಮೂರು ಕೋಟಿ ರೂ ಹಣ ಪಡೆದಿರುವ ಆರೋಪ
  • ವಿರೋಧ ಪಕ್ಷದವರ ದೂರಿಗೆ ಜೆಡಿಎಸ್ ಶಾಸಕ ಕೆಂಡಾಮಂಡಲ
ಮಂಡ್ಯ: ಚುನಾವಣೆಗೆ ಸಂಬಂಧಿಸಿದಂತೆ ಮೂರು ಕೋಟಿ ರೂ ಪಡೆಯಲಾಗಿದೆ ಎನ್ನುವ ತನ್ನ ಮೇಲಿನ ಆರೋಪಕ್ಕೆ ಆಕ್ರೋಶಗೊಂಡಿರುವ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಎಚ್.ಟಿ.ಮಂಜು, ತಾನು ಹಣ ಪಡೆದಿರುವುದು ಸಾಬೀತಾದರೆ ತಲೆ ಬೋಳಿಸಿಕೊಂಡು ಕತ್ತೆ ಮೇಲೆ ಕೂತು ಮೆರವಣಿಗೆ ಮಾಡುತ್ತೇನೆ. ಅಷ್ಟೇ ಅಲ್ಲ ನಾನೇ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹ* ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಎಂಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ಧರಣೇಶ್ ಎಂಬುರಿಂದ ಎಚ್.ಟಿ.ಮಂಜು ಹಣ ಪಡೆದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮುಖಂಡರ ವಲಯದಲ್ಲಿ ಚರ್ಚೆಯಾಗುತ್ತಿರುವ ಆರೋಪಕ್ಕೆ ಕೆಂಡಾಮಂಡಲರಾಗಿರುವ ಎಚ್.ಟಿ.ಮಂಜು, ಕೆ.ಆರ್.ಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ವೇದಿಕೆ ಭಾಷಣದಲ್ಲಿ ಆತ್ಮಹತ್ಯೆಯ ಮಾತುಗಳನ್ನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕ್ಷೇತ್ರದ ಜವಾಬ್ದಾರಿಯುತ ಜನಪ್ರತಿನಿಧಿಯೊಬ್ಬರು ಮೊಬೈಲ್ ಸಂಭಾಷಣೆಯೊಂದರಲ್ಲಿ ನಾನು ನಮ್ಮ ಪಕ್ಷದ ಎಂಡಿಸಿಸಿ ಬ್ಯಾಂಕ್ ಚುನಾವಣೆ ಅಭ್ಯರ್ಥಿಯಾಗಿದ್ದ ಧರಣೀಶ್ ಅವರಿಂದ 3 ಕೋಟಿ ರೂ.ಗೂ ಅಧಿಕ ಹಣ ಪಡೆದು ಅದರಿಂದ ಹೊಸ ಕಾರು ತೆಗೆದುಕೊಂಡಿದ್ದಲ್ಲದೆ ಗಣಪತಿ ಹಬ್ಬದ ಕಾರ್ಯಕ್ರಮ ಮಾಡಿದವರಿಗೆ ಹಂಚಿದ್ದೇನೆ ಎಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು- ಗೆಲುವುಗಳು ಸಹಜ. ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಧರಣೀಶ್ - ಧರಣೀಶ್ ಕೇವಲ ಒಂದುಮತದ ಅಂತರದಿಂದ ಪರಾಜಿತರಾಗಿದ್ದಾರೆ. ಯಾರಿಂದಲೋ ಹಣ ಪಡೆದ ಕಾರು ತೆಗೆದುಕೊಳ್ಳುವ ಸ್ಥಿತಿ ಬಂದಿಲ್ಲ ಎಂದಿದ್ದಾರೆ.
ನಾನು ನಮ್ಮ ಅಭ್ಯರ್ಥಿಯಿಂದ ಹಣ ಪಡೆದಿಲ್ಲ ಎಂದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ನಿಂತು ಪ್ರಮಾಣ ಮಾಡುತ್ತೇನೆ. ನನ್ನ ವಿರುದ್ದ ವ್ಯವಸ್ಥಿತ ಸುಳ್ಳು ಆರೋಪ ಮಾಡಿದವರು ಇದಕ್ಕೆ ಸಿದ್ದರಿದ್ದಾರಾ? ಎಂದು ಸವಾಲು ಹಾಕಿದರು.