ಮಂಡ್ಯದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಅವರಿಗೆ ಜೆಡಿಎಸ್ ಮುಖಂಡರು ದೂರು ಸಲ್ಲಿಸಿದರು. 
ಮಂಡ್ಯ

ಬಿ.ಆರ್.ರಾಮಚಂದ್ರ ವಿರುದ್ಧ ಅವಹೇಳನ ಆರೋಪ: ಮಹೇಶ್ ಗಣಿಗ ವಿರುದ್ಧ ದೂರು

ಕೆ.ಎನ್.ರಾಘವೇಂದ್ರ
ಮಂಡ್ಯ: ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮಹೇಶ್ ಗಣಿಗ ಎಂಬುವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಮುಖಂಡರು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಅವರಿಗೆ ದೂರು ಸಲ್ಲಿಸಿದರು.
ಮಹೇಶ್ ಗಣಿಗ ಎಂಬುವರು ಬಿ.ಆರ್.ರಾಮಚಂದ್ರು ಮತ್ತು ಅವರ ಸಹೋದರನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ, ಪ್ರಾಣ ಹಾನಿ ಬೆದರಿಕೆ ಹಾಕಿದ್ದಾರೆ. ಜತೆಗೆ ಜೆಡಿಎಸ್ ಪಕ್ಷದ ಬಗ್ಗೆಯೂ ತುಚ್ಚವಾಗಿ ಮಾತನಾಡಿದ್ದು, ಇದರಿಂದ ಅವರ ಗೌರವಕ್ಕೆ ಧಕ್ಕೆ ಹಾಗೂ ತೇಜೋವಧೆ ಮಾಡಿರುತ್ತಾರೆ. ಕೂಡಲೇ ಗಣಿಗ ಮಹೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಎಂ.ವಿ.ಪ್ರಕಾಶ್, ನಗರ ಘಟಕದ ಅಧ್ಯಕ್ಷ ಬೋರೇಗೌಡ, ಮುಖಂಡರಾದ ಬಿ.ಆರ್.ಸುರೇಶ್, ಮಹೇಶ್, ಭಾನುಪ್ರಕಾಶ್ ಇತರರಿದ್ದರು.