ಮಳವಳ್ಳಿ ಪಟ್ಟಣದಲ್ಲಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪುಪ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ತಳಗವಾದಿ ಹನುಮಂತು, ಚಂದಳ್ಳಿ ಶ್ರೀಧರ್, ಸಿದ್ದಾಚಾರಿ, ಬುಲೇಟ್ ನಿಂಗಣ್ಣ, ನಂದಕುಮಾರ್, ಪದ್ಮಮ್ಮ, ಅನಿತಾ, ಚಿಕ್ಕಬಾಗಿಲು ಮಹೇಶ್, ನಿರಂಜನ್, ಸಿದ್ದರಾಜು, ದುಗ್ಗನಹಳ್ಳಿ ನಾಗರಾಜು, ನಾರಾಯಣ ಇದ್ದರು. 
ಮಂಡ್ಯ

ಜೆಡಿಎಸ್‌ನಿಂದ ಅಂಬೇಡ್ಕರ್ ಜಯಂತಿ ಆಚರಣೆ

ಮಳವಳ್ಳಿ: ಜೆಡಿಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಪಟ್ಟಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ತಳಗವಾದಿ ಹನುಮಂತು, ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ್, ಜಿಲ್ಲಾ ಉಪಾಧ್ಯಕ್ಷ ಸಿದ್ದಾಚಾರಿ, ಮುಖಂಡರಾದ ಬುಲೇಟ್ ನಿಂಗಣ್ಣ, ನಂದಕುಮಾರ್, ಪದ್ಮಮ್ಮ, ಅನಿತಾ, ಚಿಕ್ಕಬಾಗಿಲು ಮಹೇಶ್, ನಿರಂಜನ್, ಸಿದ್ದರಾಜು, ದುಗ್ಗನಹಳ್ಳಿ ನಾಗರಾಜು, ನಾರಾಯಣ ಸೇರಿದಂತೆ ಇತರರಿದ್ದರು.
ಪಟ್ಟಣದ ಪುರಸಭೆ, ತಾಲೂಕು ಪಂಚಾಯಿತಿ, ಸೆಸ್ಕ್ ಕಚೇರಿಗಳಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಜ್ಜಿಗೆ, ಪಾನಕ ಹಾಗೂ ಸಿಹಿ ವಿತರಣೆ ಮಾಡಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ದೀಪಾಲಂಕಾರಗೊಳಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ, ಅನ್ನಸಂತರ್ಪಣೆ, ಮೆರವಣಿಗೆ ನಡೆಸುವ ಮೂಲಕ ಬಾಬಾ ಸಾಹೇಬ್ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.