ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಜಯಂತಿ ಆಚರಣೆ ಅರ್ಥಪೂರ್ಣವಾಗಿರಲಿ: ಎಡಿಸಿ ಬಿ.ಸಿ.ಶಿವಾನಂದಮೂರ್ತಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ರೇಣುಕಾಚಾರ್ಯ ಮತ್ತು ಯೋಗಿ ನಾರೇಯಣಯತೀಂದ್ರರ ಜಯಂತಿ
  • ಸಮುದಾಯದ ವಿಚಾರಕರು ಮತ್ತು ಚಿಂತಕರಿಂದ ಉಪನ್ಯಾಸ ಮಾಡಿಸಬೇಕು
ಮಂಡ್ಯ: ಮಾರ್ಚ್ ಮಾಹೆಯಲ್ಲಿ ಬರುವ ರೇಣುಕಾಚಾರ್ಯ ಮತ್ತು ಯೋಗಿನಾರೇಯಣಯತೀಂದ್ರರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕತೆ ವಹಿಸಿ ಮಾತನಾಡಿದ ಅವರು, ಮಹನೀಯರ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಬೇಕು. ಗಣ್ಯರಿಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ತಲುಪಿಸಬೇಕು. ವೇದಿಕೆಯನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು. ಮಹನೀಯರ ಭಾವಚಿತ್ರಗಳ ಬ್ಯಾನರ್ ಅಳವಡಿಸಬೇಕು ಮತ್ತು ಸಮುದಾಯದಲ್ಲಿ ಸಾಧನೆ ಮಾಡಿರುವಂತಹ ಸಮುದಾಯದ ಗಣ್ಯರಿಗೆ ಗೌರವವನ್ನು ಸೂಚಿಸಬೇಕು. ಸಮುದಾಯದ ವಿಚಾರಕರು ಮತ್ತು ಚಿಂತಕರಿಂದ ಉಪನ್ಯಾಸವನ್ನು ಮಾಡಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವೇದಿಕೆ ಅಲಂಕಾರ-ಸೌಂಡ್ಸ್ ಲೈಟಿಂಗ್‌ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಮುಖಂಡರಾದ ವೆಂಕಟೇಶ್, ಷಡಕ್ಷರಿ, ಚನಕೇಶವ, ಎಂ.ವಿ.ಸ್ವರ್ಣಕುಮಾರ್, ಕೆ.ನಾಗನಂದ, ಎಚ್.ಪಿ.ಮೋಹನ್, ಕೆ.ವಿ.ಮೋಹನ್‌ಕುಮಾರ್, ಕೇಶವಮೂರ್ತಿ ಇತರರಿದ್ದರು.