ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸತೀಶ್, ವಿ.ಸಿ.ಉಮಾಶಂಕರ್, ರಾಜೀವ್, ಎನ್.ಶಿವಣ್ಣ ಇದ್ದರು. school
ಮಂಡ್ಯ

ಸಾಂಸ್ಕೃತಿಕ ಚಟುವಟಿಕೆಯಲ್ಲೂ ಪಾಲ್ಗೊಳ್ಳಲಿ

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಆಶಯ

ಮದ್ದೂರು : ಸಾಧಕರಾಗಲು ವಿದ್ಯೆಯೆಂಬ ಜ್ಞಾನ ದೀವಿಗೆ ಅಗತ್ಯ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಅಭಿಪ್ರಾಯಪಟ್ಟರು.

ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಪ್ರಮೀಳಾ ವೀರಪ್ಪ ಪ್ರೌಢಶಾಲೆ ಹಾಗೂ ಕೆಂಪಮ್ಮ ಈರೇಗೌಡ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸಂಸ್ಥಾಪಕ ವಿ.ಕೆ.ವೀರಪ್ಪರವರ 97 ವರ್ಷದ ಜನ್ಮದಿನೋತ್ಸವ, 38ನೇ ಶಾಲಾ ವಾರ್ಷಿಕೋತ್ಸವ ಹಾಗೂ 10 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪಾಲಕರು, ವಿದ್ಯೆ-ಬುದ್ಧಿ ಕಲಿಸಿದ ಗುರು ಹಿರಿಯರಿಗೆ ಗೌರವ ಸಲ್ಲಿಸಬೇಕು. ಕಲಿತ ಶಾಲೆ, ಹುಟ್ಟಿದ ಊರನ್ನು, ಅನ್ನ ಹಾಕುವ ರೈತರನ್ನು ಎಂದಿಗೂ ಮರೆಯಬಾರದು. ಪಾಠ ಪ್ರವಚನದ ಜತೆಗೆ ಆಟೋಟಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಮುಖ್ಯಸ್ಥ ಬಿ.ವಿ.ಸತೀಶ್, ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ ಮತ್ತು ಮಹಾದಾಸೆಯಿಂದ ವಿ.ಕೆ.ವೀರಪ್ಪನವರು ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರು. ಉಚಿತ ಶಿಕ್ಷಣ ಸೇರಿದಂತೆ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಸಂಸ್ಥೆಯ ಉನ್ನತಿಗೆ ಸಹಕರಿಸುವಂತೆ ಕೋರಿದರು.

ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿದ ಶಾಲಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆ ಟ್ರಸ್ಟಿ ಅಂಜು ವಿ.ಸತೀಶ್, ಮುಖ್ಯ ಶಿಕ್ಷಕ ರಾಜೀವ್, ಉದ್ಯಮಿ ಕೊತ್ತನಹಳ್ಳಿ ಶಂಕರ್, ಹುಡ್ಕೊ ಸಂಸ್ಥೆಯ ಸಿ.ಎಂ.ಉಮೇಶ್, ನಿವೃತ್ತ ಶಿಕ್ಷಕರಾದ ಎನ್. ಶಿವಣ್ಣ, ನಂಜುಂಡೇಗೌಡ, ಪುಟ್ಟಲಿಂಗಯ್ಯ ಇತರರಿದ್ದರು.