- ಅಂಗವಿಕಲರ ರಾಷ್ಟ್ರೀಯ ಪ್ಯಾರಾ ಟೇಬಲ್ ಟೆನಿಸ್ ಪಂದ್ಯಾವಳಿ
ಕಿಕ್ಕೇರಿ: ಸಮೀಪದ ಹೆಗಡಹಳ್ಳಿ ಗ್ರಾಮದ ಎಚ್.ಎಂ.ಜಗನ್ನಾಥ್ ಅಂಗವಿಕಲರ ರಾಷ್ಟ್ರೀಯ ಪ್ಯಾರಾ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಗುಜರಾತ್‌ನ ವಡೋದರದಲ್ಲಿ ಇತ್ತೀಚೆಗೆ ನಡೆದ ಕ್ರೀಡೆಯಲ್ಲಿ ಕರ್ನಾಟಕ ರಾಜ್ಯದಿಂದ ಎಚ್.ಎಂ.ಜಗನ್ನಾಥ್ ಸ್ಪರ್ಧಿಸಿ ಬೆಳ್ಳಿ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಜಗನ್ನಾಥ್ ಗುಜರಾತ್‌ನ ಗಾಂಧಿನಗರದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.