ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯ ಎಸ್.ವಿ.ಎಂ. ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ ಆಚರಣೆ ಅಂಗವಾಗಿ ರಾಗಿ ಹಾಗೂ ಭತ್ತದ ರಾಶಿಗೆ ಪೂಜೆ ಸಲ್ಲಿಸಲಾಯಿತು. ರೂಪಾ ದೇವರಾಜು, ಸುಬ್ರಹ್ಮಣ್ಯ, ರಶ್ಮಿತಾ, ವಿನೋದ್, ಶೃತಿ, ಜಯವಾಣಿ, ನಿಶ್ಚಿತಾ, ದೀಪಿಕಾ, ರಂಗನಾಥ್, ಮಮತಾ, ಕಾವ್ಯಾ, ಸುಪ್ರೀತಾ , ಡಿಂಪಲ್ ಇದ್ದರು.
- ಅಧ್ಯಕ್ಷೆ ರೂಪ ದೇವರಾಜು ವಿದ್ಯಾರ್ಥಿಗಳಿಗೆ ಕಿವಿ ಮಾತು
ಮದ್ದೂರು: ದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡುವ ಜತೆಗೆ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ರೂಡಿಸಿಕೊಳ್ಳಬೇಕೆಂದು ಎಸ್.ವಿ.ಎಂ.ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷೆ ರೂಪಾ ದೇವರಾಜು ಕಿವಿ ಮಾತು ಹೇಳಿದರು.
ತಾಲೂಕಿನ ಹೆಮ್ಮನಹಳ್ಳಿಯ ಎಸ್.ವಿ.ಎಂ. ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ ಆಚರಣೆ, ಮಕ್ಕಳ ಆಹಾರ ಮೇಳ, ಕನ್ನಡ ವಿಜ್ಞಾನ ಗಣಿತ ಸಮಾಜ ಹಾಗೂ ಸಂಸ್ಕೃತಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಜತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ನೊಂದವರ ಬಾಳಿಗೆ ಆಶಾಕಿರಣವಾಗಬೇಕು. ಆಗಾ ಮಾತ್ರ ವ್ಯಕ್ತಿಯ ಜೀವನ ಪರಿಪೂರ್ಣವಾಗಲು ಸಾಧ್ಯ ಎಂದರು.
ಪ್ರಪಂಚದಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವವಿದ್ದು ವಿದ್ಯಾರ್ಥಿಗಳು ಇದನ್ನರಿತು ನಿರಂತರವಾಗಿ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿಯನ್ನು ತರಬೇಕೆಂದರು.
ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಜತೆಗೆ ಮಾನವೀಯ ಮೌಲ್ಯಗಳ ಅಳವಡಿಕೆ, ಸಂಸ್ಕೃತಿ, ಸಂಸ್ಕಾರಗಳ ಬಗೆಯೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕಾರ್ಯ ಮಾಡುತ್ತಿದ್ದು ಇದರಿಂದ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಬರುವುದರ ಜತೆಗೆ ಉತ್ತಮ ವ್ಯಕ್ತತ್ವ ಬೆಳಸಿಕೊಳ್ಳುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಕ್ರಾಂತಿ ಸಂಭ್ರಮ ಆಚರಣೆ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗೋ ಪೂಜೆ, ರಾಶಿ ಪೂಜೆ ಮಾಡಿ ಎಳ್ಳು ಬೀರಿ ಸಂಭ್ರಮಿಸಿದರು. ಮಕ್ಕಳ ಆಹಾರ ಮೇಳದಲ್ಲಿ ವಿವಿಧ ರೀತಿಯ ಆಹಾರಗಳನ್ನು ಸಿದ್ಧ ಮಾಡಿಕೊಂಡು ಬಂದು ವಿದ್ಯಾರ್ಥಿಗಳು ಮಾರಾಟ ಮಾಡಿದರು ಹಾಗೂ ವಿದ್ಯಾರ್ಥಿಗಳು ಕನ್ನಡ ವಿಜ್ಞಾನ ಗಣಿತ ಸಮಾಜ ಹಾಗೂ ಸಂಸ್ಕೃತಿ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮಲಿರುವ ಸಾಮಾಥ್ರ್ಯವನ್ನು ತೋರಿಸಿದರು.ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸಹ ಶಿಕ್ಷಕರಾದ ರಶ್ಮಿತಾ, ವಿನೋದ್, ಶೃತಿ, ಜಯವಾಣಿ, ನಿಶ್ಚಿತ, ದೀಪಿಕಾ, ರಂಗನಾಥ್, ಮಮತಾ, ಕಾವ್ಯಾ, ಸುಪ್ರೀತಾ ,ಡಿಂಪಲ್ ಇದ್ದರು.