ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನದಲ್ಲಿನ ದೋಣಿ ವಿಹಾರ ಕೇಂದ್ರ ಬಳಿಯಿರುವ ಚಿಕ್ಕ ಕಾವೇರಿ ಪ್ರತಿಮೆ ಆವರಣ ಸುತ್ತಮುತ್ತ ಸುರಕ್ಷತಾ ಗ್ರಿಲ್‌ಗಳನ್ನು ಅಳವಡಿಸಿರುವುದು  
ಮಂಡ್ಯ

ಕಾರಂಜಿಗಳ ಸುತ್ತಮುತ್ತ ಗ್ರಿಲ್ ಅಳವಡಿಕೆ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ
  • ದೋಣಿ ವಿಹಾರ ಕೇಂದ್ರ ಬಳಿಯಿರುವ ಚಿಕ್ಕ ಕಾವೇರಿ ಪ್ರತಿಮೆ ಆವರಣ
  • ಕಾರಂಜಿಗಳ ಸುತ್ತಮುತ್ತ ಗ್ರಿಲ್‌ಗಳನ್ನು ಮತ್ತೆ ಅಳವಡಿಸಲಾಗಿದೆ
ಕೆ.ಆರ್.ಸಾಗರ: ಇಲ್ಲಿನ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನದಲ್ಲಿನ ದೋಣಿ ವಿಹಾರ ಕೇಂದ್ರ ಬಳಿಯಿರುವ ಚಿಕ್ಕ ಕಾವೇರಿ ಪ್ರತಿಮೆ ಆವರಣ ಸೇರಿದಂತೆ ಕಾರಂಜಿಗಳ ಸುತ್ತಮುತ್ತ ಗ್ರಿಲ್‌ಗಳನ್ನು ಮತ್ತೆ ಅಳವಡಿಸಲಾಗಿದೆ.
ಕಾರಂಜಿಗಳ ಸುತ್ತಲಿನ ಸುರಕ್ಷತಾ ಗ್ರಿಲ್‌ಗಳನ್ನು ಕಾವೇರಿ ಆರತಿ ಕಾರ್ಯಕ್ರಮದ ಸಮಯದಲ್ಲಿ ತೆಗೆದು ಹಾಕಿ ಕಾರ್ಯಕ್ರಮ ನಡೆಸಲಾಗಿತ್ತು. ಅಲ್ಲದೆ ತಿಂಗಳುಗಳು ಕಳೆದರೂ ಗ್ರಿಲ್ ಹಾಕದೆ ನಿರ್ಲಕ್ಷೃ ವಹಿಸಿರುವ ಕುರಿತು ವಿಜಯವಾಣಿಯಲ್ಲಿ ಇತ್ತೀಚೆಗೆ ಸುದ್ದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇದಿಗ ಬೃಂದಾವನದ ದೋಣಿ ವಿಹಾರ ಕೇಂದ್ರ ಬಳಿ ಕಿತ್ತು ಹಾಕಿದ್ದ ಸುರಕ್ಷತಾ ಗ್ರಿಲ್‌ಗಳನ್ನು ಮತ್ತೆ ಅಳವಡಿಸಿದ್ದಾರೆ.