ಮಳೆ ಕುರಿತು ಭಾರತೀಯ ಹವಾಮಾನ ಇಲಾಖೆ ವರದಿ
- ಸೋಮವಾರ ರಾತ್ರಿ ಜಿಲ್ಲೆಯಲ್ಲಿ 1.4 ಮಿ.ಮೀ ಮಳೆ ದಾಖಲು
- ಮಳವಳ್ಳಿ ತಾಲೂಕಿನಲ್ಲಿ 5.3 ಮಿ.ಮೀ ಮಳೆ
ಮಂಡ್ಯ: ಜಿಲ್ಲೆಯಲ್ಲಿ ಮಾ.18ರಿಂದ 22ರವರೆಗೆ ಹಗುರ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ತಿಳಿಸಿದೆ.
18 ಮತ್ತು 19ರಂದು 4 ಮಿ.ಮೀ, 20ರಿಂದ 22ರವರೆಗೆ 5 ಮಿ.ಮೀ ಮಳೆಯಾಗಬಹುದು. ಈ ಅವಧಿಯಲ್ಲಿ ಗರಿಷ್ಟ 34ರಿಂದ 35 ಹಾಗೂ ಕನಿಷ್ಟ 17ರಿಂದ 18 ಡಿಗ್ರಿ ಸೆಲ್ಸಿಯಸ್ಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ. ಇನ್ನು ಸೋಮವಾರ ರಾತ್ರಿ ಜಿಲ್ಲೆಯಲ್ಲಿ 1.4 ಮಿ.ಮೀ ಮಳೆಯಾಗಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ 1.3 ಮಿ.ಮೀ ಹಾಗೂ ಮಳವಳ್ಳಿಯಲ್ಲಿ 5.3 ಮಿ.ಮೀ ಮಳೆಯಾಗಿದೆ.