ಮದ್ದೂರು ತಾಲೂಕಿನ ಸೋಮನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಬಗ್ಗೆ ಭಯ ಬೇಡ ಜಾಗೃತಿ ಇರಲಿ ಎಂಬ ಕಾರ್ಯಕ್ರಮವನ್ನು ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಉದ್ಘಾಟಿಸಿದರು. ಸಿ.ಆಶಾ, ಡೇವಿಡ್, ಕೃಷ್ಣಪ್ಪ, ನಾಗರಾಜು, ಭವಾನಿ, ಮಂಜುಳಾ ಇದ್ದರು.
ಅಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಟಿ.ಹನುಮಂತು ಕಳವಳ
ಮದ್ದೂರು: ಜಾಗತಿಕವಾಗಿ ಪ್ರತಿ ವರ್ಷ ಕ್ಯಾನ್ಸರ್‌ನಿಂದ 1 ಕೋಟಿ ಜನರು ಮೃತಪಡುತ್ತಿರುವುದು ಆತಂಕಕಾರಿ ಸಂಗತಿ ಎಂದು ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಸೋಮನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ಕ್ಯಾನ್ಸರ್ ಬಗ್ಗೆ ಭಯ ಬೇಡ ಜಾಗೃತಿ ಇರಲಿ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಸಿದರು.
ಕ್ಯಾನ್ಸರ್ ಒಂದು ಸಂಕೀರ್ಣ ಕಾಯಿಲೆಯಾಗಿ ಸುಮಾರು 100 ಕ್ಕೂ ಹೆಚ್ಚು ವಿಧಗಳಿವೆ. ಕೂದಲು ಹಾಗೂ ಉಗುರು ಇವರೆಡನ್ನೂ ಬಿಟ್ಟು ಮನುಷ್ಯನ ದೇಹದ ಇನ್ಯಾವುದೇ ಭಾಗಕ್ಕೆ ಕ್ಯಾನ್ಸರ್ ಬರಬಹುದು. ಕ್ಯಾನ್ಸರ್ ಸಾಮಾಜಿಕವಾಗಿಯೂ ಹಾಗೂ ಆರ್ಥಿಕವಾಗಿಯೂ ದೇಶಕ್ಕೆ ಹೊರೆಯಾಗಿದ್ದು ಅದನ್ನು ತಪ್ಪಿಸಬಹುದಾಗಿದೆ. ಈ ಮಹಾಮಾರಿಗೆ ಕಾರಣವಾಗಬಹುದಾದ ಧೂಮಪಾನ, ಮದ್ಯಪಾನ, ಸ್ಥೂಲಕಾಯ, ಬೊಜ್ಜು ಸೋಂಕು ಮುಂತಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅವುಗಳ ನಿಯಂತ್ರಣಕ್ಕೆ ಒತ್ತು ನೀಡಬೇಕು. ಈ ಮೂಲಕ ಕ್ಯಾನ್ಸರ್‌ನಿಂದ ಸಂಭವಿಸಬಹುದಾದ ಲಕ್ಷಾಂತರ ಸಾವುಗಳನ್ನು ತಡೆಯಬಹುದು ಎಂದು ಸಲಹೆ ನೀಡಿದರು.
ಮಿಮ್ಸ್ ಪ್ರಾಧ್ಯಾಪಕ ಡಾ.ಸಿದ್ದಲಿಂಗಪ್ಪ ಹೂಗಾರ್ ಕ್ಯಾನ್ಸರ್ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಪ್ರಾಂಶುಪಾಲೆ ಸಿ.ಆಶಾ, ಅಲಯನ್ಸ್ ಸಂಸ್ಥೆಯ ಡೇವಿಡ್, ಎಸ್.ಎನ್.ಕೃಷ್ಣಪ್ಪ, ನಾಗರಾಜು, ಲೋಕೇಶ್, ವಾರ್ಡನ್ ಗಿರೀಶ್, ವಸತಿ ಶಾಲೆಯ ಭವಾನಿ ಲೋಕೇಶ್, ಮಂಜುಳಾ, ಅನುಪಮಾ, ದಿವ್ಯಾ, ರಂಜಿತಾ, ಶಿಲ್ಪಾ, ಅರ್ಜುನಪುರಿ ಅಲಯನ್ಸ್ ಸಂಸ್ಥೆಯ ಸುನಿತಾ ಇದ್ದರು.