ಕಿಕ್ಕೇರಿ ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಎಚ್.ಟಿ. ಮಂಜು ಉದ್ಘಾಟಿಸಿದರು. ಬಿ. ನಾಗೇಂದ್ರಕುಮಾರ್, ಶ್ರೀನಿವಾಸ್, ಕೆ. ಸುಷ್ಮಾ, ವಿಜಯ್ ಮತ್ತಿತರರಿದ್ದರು.
ಕಿಕ್ಕೇರಿ: ಒಂದು ಗ್ರಾಮ ಅಭಿವೃದ್ಧಿಯಾಗಲು ಗ್ರಾಮ ಪಂಚಾಯಿತಿ ದಕ್ಷತೆ ಕೆಲಸ ಅಡಗಿದೆ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನೂತನ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡುತ್ತ, ಐಕನಹಳ್ಳಿ ಗ್ರಾಪಂ ಮಾದರಿಯಾಗಿದೆ. ಇಲ್ಲಿನ ಪಿಡಿಒ ವಿಜಯ್, ಸಿಬ್ಬಂದಿು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಗ್ರಾಪಂ 15ನೇ ಹಣಕಾಸು ಯೋಜನೆಯಡಿಯಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದೆ. ಈ ಗ್ರಾಪಂ ಮಾದರಿ ಗ್ರಾಮ ಪಂಚಾಯಿತಿಯಾಗಿದ್ದು, ಕಳೆದ 5ವರ್ಷಗಳಿಂದ ಇಲ್ಲಿದ್ದ ಗ್ರಾಪಂ ಸದಸ್ಯರು ಉತ್ತಮ ಕೆಲಸ ಮಾಡಿದ್ದಾರೆ. ರಸ್ತೆ, ಒಳಚರಂಡಿಯಂತಹ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ನೀಡಿದ್ದಾರೆ. ಸಂಜೀವಿನಿ ಕಟ್ಟಡ, ಗ್ರಂಥಾಲಯ ಕಟ್ಟಡ ಮಾಡಲಾಗಿದೆ. ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಸ್ಥಳ ದಾನಿ ಮಾಡಿರುವ ಕುಟುಂಬಕ್ಕೆ ಮಾದರಿಯಾಗಿದೆ ಎಂದು ನುಡಿದರು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ನಾಗೇಂದ್ರಕುಮಾರ್ ಮಾತನಾಡಿ, ಗ್ರಾಪಂ.ನಲ್ಲಿರುವ ನರೇಗಾ ಯೋಜನೆಯಡಿಯಲ್ಲಿ ಕೆಲಸಗಳನ್ನು ಮಾಡಲು ಮುಂದಾಗಿ. ನರೇಗಾ ಎಲ್ಲರ ಬದುಕಿಗೆ ವರದಾನವಾಗಿದೆ ಎಂದು ನುಡಿದರು.
ಅಂಗನವಾಡಿ ಕೇಂದ್ರಕ್ಕೆ ಸ್ಥಳ ದಾನ ಮಾಡಿದ ದಾನಿ ಕುಟುಂಬದ ಪಟೇಲ್ ದೇವಮ್ಮ ಈರೇಗೌಡ, ಸುಕನ್ಯಾ, ಎ.ಇ. ಕುಮಾರ್, ಸೃಷ್ಟಿ, ಡಾ. ದರ್ಶನ್, ಪರಿಸರ ಇಲಾಖೆ ವಿಜ್ಞಾನಿ ದರ್ಶನ್ ಅವರನ್ನು ಗೌರವಿಸಲಾಯಿತು.
ಗ್ರಾಪಂ ಆಡಳಿತಾಧಿಕಾರಿ ಶ್ರೀನಿವಾಸ್, ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ಪಂಚಾಯತ್ ರಾಜ್ ಇಲಾಖೆ ಎಇಇ ಮಂಜುಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿದ್ಯಾವತಿ ಓಂಕಾರಗೌಡ, ಪಿಡಿಒ ವಿಜಯ್, ಮುಖಂಡರಾದ ಪ್ರವೀಣ್, ಐಕನಹಳ್ಳಿ ಕೃಷ್ಣೇಗೌಡ, ಶೇಖರ್, ಬಿ. ರಾಮೇಗೌಡ ಮತ್ತಿತರರಿದ್ದರು.