ಪಾಂಡವಪುರ ಬಸ್ ನಿಲ್ದಾಣದಿಂದ ಹಾರೋಹಳ್ಳಿ ಕೆಎಚ್‌ಬಿ ಕಾಲನಿವರೆಗೆ ಅಳವಡಿಸಿರುವ ವಿದ್ಯುತ್ ಬೀದಿ ದೀಪಗಳನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. 
ಮಂಡ್ಯ

ಪಾಂಡವಪುರ-ಹಾರೋಹಳ್ಳಿವರೆಗೆ ಬೀದಿ ದೀಪ ವ್ಯವಸ್ಥೆ

ಪಾಂಡವಪುರ: ಲೋಕೋಪಯೋಗಿ ಇಲಾಖೆ ವತಿಯಿಂದ ಪಾಂಡವಪುರ ಬಸ್ ನಿಲ್ದಾಣದಿಂದ ಹಾರೋಹಳ್ಳಿ ಕೆಎಚ್‌ಬಿ ಕಾಲನಿವರೆಗೆ ಅಳವಡಿಸಿರುವ ಅಲಂಕಾರಿಕ ಬೀದಿ ದೀಪಗಳನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸುಮಾರು 1.52 ಕೋಟಿ ರೂ.ವೆಚ್ಚದಲ್ಲಿ 3 ಕಿ.ಮೀ.ವರೆಗೆ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ನವೀನ ಮಾದರಿಯ ಒಟ್ಟು 106 ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದ್ದರಿಂದ ಬೇಡಿಕೆಗೆ ಸ್ಪಂದಿಸಿ ತುರ್ತಾಗಿ ಬೀದಿ ದೀಪಗಳ ವ್ಯವಸ್ಥೆ ಪೂರ್ಣಗೊಳಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಾಯ್ ಕುಮಾರ್, ಪುರಸಭೆ ನಾಮ ನಿರ್ದೇಶನ ಸದಸ್ಯ ಎಂ.ಮುರಳೀಧರ್, ಪಟೇಲ್ ರಮೇಶ್, ಮಹಮದ್ ಹನೀಫ್, ಹಾರೋಹಳ್ಳಿ ಲಕ್ಷ್ಮೇಗೌಡ, ಮಾಜಿ ಅಧ್ಯಕ್ಷ ಡಿ.ಹುಚ್ಚೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ ಎಣ್ಣೆಹೊಳೆಕೊಪ್ಪಲು ಮಂಜುನಾಥ್, ಪುರಸಭೆ ಮಾಜಿ ಸದಸ್ಯರಾದ ಶ್ರೀನಿವಾಸ್, ಕೆ.ಉಮಾಶಂಕರ್, ಮಹಿಳಾ ಹೋರಾಟಗಾರ್ತಿ ಅರಳಕುಪ್ಪೆ ರೂಪಾ, ರೈತ ಸಂಘದ ಮುಖಂಡರಾದ ಗರಡಿಮನೆ ಚಂದ್ರಶೇಖರ್, ರಾಮಕೃಷ್ಣ, ಅರಗಪ್ಪರ ರಮೇಶ್, ಚಿಕ್ಕಣ್ಣ, ಕೊನಾರಿ ಮಂಜು, ಬೇವಿನಕುಪ್ಪೆ ಅನಿಲ್, ಕಾಂಗ್ರೆಸ್ ಮುಖಂಡರಾದ ಬಿ.ಜೆ.ಸ್ವಾಮಿ, ಕಣಿವೆ ರಾಮು ಉಪಸ್ಥಿತರಿದ್ದರು.