ರಕ್ಷಣೆಯಾದ ಜಾನುವಾರುಗಳು. 
ಮಂಡ್ಯ

ಅಕ್ರಮ ಗೋವು ಸಾಗಣೆ, ಚಾಲಕ ಸೆರೆ

ಪ್ರಮುಖ ಮುಖ್ಯಾಂಶಗಳು

  • 11 ರಾಸುಗಳು ರಕ್ಷಣೆ
ಕೆ.ಆರ್.ಸಾಗರ: ಅಕ್ರಮವಾಗಿ ಕಾಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ತಡೆದು ಗುರುವಾರ 11 ರಾಸುಗಳನ್ನು ರಕ್ಷಿಸಿರುವ ಪಟ್ಟಣ ಪೊಲೀಸರು ವಾಹನ ಚಾಲಕನ್ನು ಬಂಧಿಸಿದ್ದಾರೆ.
ಚಾಲಕ ಮಹಮದ್ ಬಿಲಾಲ್ ಬಂಧಿತ ಆರೋಪಿ. ಚುಂಚನಕಟ್ಟೆಯಿಂದ ತಮಿಳುನಾಡಿನ ಕಾಸಾಯಿಖಾನೆಗೆ ಅಕ್ರಮವಾಗಿ ಜಾನುವಾರುಗಳನ್ನು ಕ್ಯಾಂಟರ್‌ನಲ್ಲಿ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಗುರುವಾರ ಬೆಳಗಿನ ಜಾವ ಕಾರ್ಯಾಚರಣೆ ನಡೆಸಿದ ಪಿಎಸೈ ಜಗದೀಶ್ ಧೂಳ್‌ಶೆಟ್ಟರ್ ಮತ್ತು ಸಿಬ್ಬಂದಿ ಕೆ.ಆರ್.ಸಾಗರ ಪಟ್ಟಣ ಬಳಿ ವಾಹನ ತಡೆದು ತಪಾಸಣೆ ನಡೆಸಿದರು. ಈ ವೇಳೆ ಕ್ಯಾಂಟರ್‌ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದು ತಿಳಿಯಿತು.
ಹಸು, ಎತ್ತು, ಕೋಣ ಸೇರಿದಂತೆ ಒಟ್ಟು 11 ರಾಸುಗಳನ್ನು ತಕ್ಷಣ ರಕ್ಷಿಸಿ ಮೈಸೂರಿನ ಪಿಂಜರಾಪೋಲ್‌ಗೆ ರವಾನಿಸಲಾಯಿತು.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ರೀರಂಗಪಟ್ಟಣ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.