ಮದ್ದೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಬಸನಗೌಡ ಪಾಟೀಲ ಯತ್ನಾಳ್, ಅನಂತಕುಮಾರ್ ಹೆಗಡೆ, ರಾಜು ಸ್ವಾಮೀಜಿ, ನಿತ್ಯಾನಂದ ಇದ್ದರು. 
ಮಂಡ್ಯ

ನಮ್ಮ ಸರ್ಕಾರ ಬಂದ್ರೆ ಮೊಕದ್ದಮೆ ವಾಪಸ್

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್
  • ಹಳೇ ಬಸ್ ನಿಲ್ದಾಣ ಆವರಣ
  • ವಿವಿಧ ಹಿಂದೂ ಪರ ಸಂಘಟನೆ
ಮದ್ದೂರು: ಅಲ್ಪಸಂಖ್ಯಾತರು ಗಣೇಶನಿಗೆ ಕಲ್ಲು ಹೊಡೆದರೆ 2028ಕ್ಕೆ ಬುಲ್ಡೊಜರ್ ಬರುವುದರ ಜತೆಗೆ ಪೊಲೀಸರ ಕೈಗೆ ಎಕೆ-47 ಕೊಡ್ತೀವಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಗರದ ಹಳೇ ಬಸ್ ನಿಲ್ದಾಣ ಆವರಣದಲ್ಲಿ ಸೋಮವಾರ ಸಂಜೆ ವಿವಿಧ ಹಿಂದೂ ಪರ ಸಂಘಟನೆ ವತಿಯಿಂದ ಆಯೋಜಿಸಿದ್ದ ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೂ ಪರ ಸಂಘಟನೆಯವರ ಮೇಲೆ ಈಗಿನ ಕಾಂಗ್ರೆಸ್ ಸರ್ಕಾರ ಹಾಕಿರುವ ಮೊಕದ್ದಮೆಯನ್ನು ನಮ್ಮ ಸರ್ಕಾರ ಬಂದ ಮೇಲೆ ವಾಪಸ್ ಪಡೆಯಲಿದೆ ಎಂದರು.
ಮುಂದಿನ ದಿನಗಳಲ್ಲಿ ಗಣೇಶ ಹಬ್ಬದಂದು ಬೀದರ್‌ನಿಂದ ಚಾಮರಾಜನಗರದವರೆಗೆ ಹಿಂದೂ ಸಂಘಟನೆಯನ್ನು ಬಲಪಡಿಸಲಾಗುವುದು. ನಮ್ಮಲ್ಲೇ ಸಹೋದರತ್ವ ಬೆಳೆಸಿಕೊಳ್ಳಬೇಕು. ಎಲ್ಲಿಯವರೆಗೆ ಮುಸ್ಲಿಮರು ಭಾರತ ದೇಶದಲ್ಲಿರುತ್ತಾರೋ ಅಲ್ಲಿಯವರೆಗೆ ದೇಶದ ಜನತೆ ಶಾಂತಿಯಿಂದ ಇರಲು ಸಾಧ್ಯವಿಲ್ಲವೆಂದು ಆಗಲೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತಿಳಿಸಿದ್ದರು ಎಂದರು.
ಮದ್ದೂರು ಗಂಡು ಮೆಟ್ಟಿದ ಸ್ಥಳವಾಗಿದ್ದು ಈ ಭೂಮಿಗೆ ತನ್ನದೇ ಆದ ಹಿರಿಮೆಯಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್‌ಸಿಂಗ್, ವೀರ ಸಾವರ್ಕರ್‌ರಂತಹ ಸಾವಿರಾರು ಮಹನೀಯರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದು, ಅದಕ್ಕಾಗಿಯೇ ಮಾ. 23ರಂದು ಬಲಿದಾನ್ ದಿವಸ್ ಆಚರಿಸಲಾಗುತ್ತಿದೆ ಎಂದರು.
ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮಾತನಾಡಿ, ಸ್ವಾತಂತ್ರ್ಯ ಕೇವಲ ಸತ್ಯಾಗ್ರಹದಿಂದ ಸಿಗಲಿಲ್ಲ. ಬದಲಾಗಿ ಸಾವಿರಾರು ಯೋಧರ ಬಲಿದಾನದಿಂದ ಸಿಕ್ಕಿದೆ. ಸಮಾಜದಲ್ಲಿ ಜಾತಿ ದೂರವಾಗಿ ನಮ್ಮ ಧರ್ಮ ಒಂದಾಗಬೇಕು. ಆಗ ಮಾತ್ರ ಬಲಿದಾನ್ ದಿವಸ್‌ಗೆ ಅರ್ಥ ಸಿಗಲಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಐಬಿ ವೃತ್ತದಿಂದ ಪೇಟೆಬೀದಿ ಮೂಲಕ ಹಳೇ ಬಸ್ ಸ್ಟ್ಯಾಂಡ್‌ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಈ ವೇಳೆ ವಾಹನದ ಮೇಲೆ ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ಮಾಡಲಾಯಿತು. ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಶಿವಪುರದ ರಾಜು ಸ್ವಾಮೀಜಿ, ಮುಖಂಡರಾದ ಕದಲೂರು ನವೀನ್, ಜಗನ್ನಾಥ್, ವೀರಭದ್ರಸ್ವಾಮಿ ಇತರರು ಹಾಜರಿದ್ದರು.
23ಎಂಡಿಆರ್1