ಕೆಆರ್‌ಎಸ್‌ನ ತೋಟಗಾರಿಕೆ ಕಚೇರಿಯಲ್ಲಿ ರೈತರಿಗೆ ತೆಂಗಿನ ಸಸಿಗಳನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ವಿತರಿಸಿದರು. ಫಾರೂಕ್ ಅಭು, ಸೌಮ್ಯಾ, ಚೈತ್ರಾ ಇತರರು ಇದ್ದರು. 
ಮಂಡ್ಯ

ನಾನೂ ಸಚಿವ ಸ್ಥಾನದ ಆಕಾಂಕ್ಷಿ

ಕೆ.ಆರ್.ಸಾಗರ: ನಾನು ಮೂರು ಬಾರಿ ಜನರ ಆಶೀರ್ವಾದದಿಂದ ಗೆದ್ದಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಈಗ ಸಚಿವ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದೇನೆ. ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧನಿದ್ದೇನೆ ಎಂದು ಸೆಸ್ಕ್ ಅಧ್ಯಕ್ಷ, ಶಾಸಕ ರಮೇಶ ಬಾಬು ಬಂಡಿಸಿದ್ದೇಗೌಡ ತಿಳಿಸಿದರು.
ಇಲ್ಲಿನ ಬೃಂದಾವನದಲ್ಲಿನ ತೋಟಗಾರಿಕೆ ಕಚೇರಿ ಮುಂಭಾಗ ರೈತರಿಗೆ ತೆಂಗಿನ ಸಸಿಗಳನ್ನು ವಿತರಿಸಿ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿಯೇ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ ಅವಕಾಶ ಸಿಗಲಿಲ್ಲ. ಈಗ ಅವಕಾಶ ಕೊಟ್ಟರೆ
ಚುನಾವಣೆಯಲ್ಲಿ ಜನರ ಆರ್ಶೀವಾದದಿಂದ ಗೆದ್ದಿದ್ದು, ಅವರಿಗೊಸ್ಕರ ಸ್ಥಳೀಯ ಜನತೆ ಸೇರಿದಂತೆ ರಾಜ್ಯದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಲು ಸಚಿವಸ್ಥಾನದ ಪಡೆಯಲು ಆಸೆಯಿದೆ, ನನ್ನಕ್ಷೇತ್ರದ ರಂಗನಾಥಸ್ವಾಮಿ ಮತ್ತು ಚಾಮುಂಡೇಶ್ವರಿ ದೇವಿಯ ಆರ್ಶಿವಾದದಿಂದ ನಾನು ಬೆಳೆದು ಬಂದಿದ್ದು, ನನಗೆ ಸಚಿವ ಸ್ಥಾನ ಕೊಟ್ಟರೆ ನಾನು ನಿಭಾಯಿಸಲು ಸಿದ್ದನಿದ್ದೇನೆ, ಈ ಹಿಂದೆ ಕೂಡ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೆ. ನನಗೆ ಸೆಸ್ಕ್ ಅಧ್ಯಕ್ಷ ಸ್ಥಾನ ನೀಡಿದ್ದರು. ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇನೆ. ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ಅದಕ್ಕೆ ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ರೈತರನ್ನುದ್ದೇಶಿಸಿ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆ ವತಿಯಿಂದ 1,700 ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಮೊದಲು ನೋಂದಣಿ ಮಾಡಿದವರಿಗೆ ವಿತರಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಸಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸೌಮ್ಯಾ ಮಾತನಾಡಿ, ಈ ಭಾರಿ 800 ಹೈಬ್ರಿಡ್ ಮತ್ತು 900 ನಾಟಿ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹೈಬ್ರಿಡ್ ಸಸಿಗೆ 170 ರೂ.ನಾಟಿ ಸಸಿಗೆ 75 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಫಾರೂಕ್ ಅಭು, ಸಹಾಯಕ ತೋಟಗಾರಿಕೆ ನಿರ್ದೇಶಕಿ ಚೈತ್ರಾ, ಅಧಿಕ್ಷಕರಾದ ಸತೀಶ್, ಮಹೇಶ್, ದೇವೇಂದ್ರ, ನಂದಿನಿ, ಎಂ.ಬಿ.ಕುಮಾರ್, ಗ್ರಾಪಂ ಮಾಜಿ ಸದಸ್ಯ ಜಗದೀಪ್ ಸಿಂಗ್, ದೇವರಾಜು, ರಾಮು, ಪಿಡಿಒ ಬಸವರಾಜು, ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಸಂಜು, ರಾಮದಾಸ್, ಬಾಲು ಇತರರು ಇದ್ದರು.