ಕೊಲೆಗೈದ ಪತಿ ರಮೇಶ್ ಪತ್ನಿ ರಶ್ಮಿಯೊಂದಿಗೆ. 
ಮಂಡ್ಯ

ಶೀಲ ಶಂಕಿಸಿ ಪತಿಯಿಂದ ಪತ್ನಿ ಹತ್ಯೆ

ಶ್ರೀರಂಗಪಟ್ಟಣ: ತಾಲೂಕಿನ ಆಲಗೂಡು ಗ್ರಾಮದಲ್ಲಿ ಶೀಲ ಶಂಕಿಸಿ ಪತಿಯೇ ಪತ್ನಿಯ ತಲೆಗೆ ರಾಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ರಶ್ಮಿ (36) ಮೃತಪಟ್ಟ ಗೃಹಿಣಿ. ಪತಿ ರಮೇಶ(54) ಕೊಲೆಗೈದು ತಲೆಮರೆಸಿಕೊಂಡಿದ್ದಾನೆ.
ಗ್ರಾಮದ ಮನೆಯಲ್ಲಿ ಬುಧವಾರ ರಾತ್ರಿ 9ಗಂಟೆ ವೇಳೆ ದಂಪತಿ ನಡುವೆ ಕಲಹ ಏರ್ಪಟ್ಟು ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಾತಿನ ಚಕಮಕಿ ನಡುವೆ ರಮೇಶ ರಾಡಿನಿಂದ ರಶ್ಮಿ ತಲೆಗೆ ಹೊಡೆದು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಸ್ಥಳೀಯರಿಂದ ವಿಚಾರ ತಿಳಿದು ತೂಬಿನಕೆರೆ ಗ್ರಾಮದಿಂದ ಮೃತಳ ಸಹೋದರ ಹಾಗೂ ಅರಕೆರೆ ಠಾಣೆ ಪಿಎಸ್‌ಐ ವಿನೋದ್ ಆಗಮಿಸಿದ್ದಾರೆ. ಈ ವೇಳೆ ಕೊಂಚ ನರಳಾಡುತ್ತಿದ್ದ ಆಕೆಯನ್ನು ತಕ್ಷಣ ವಾಹನದಲ್ಲಿ ಮಿಮ್ಸ್‌ಗೆ ರವಾನಿಸಿದ್ದಾರೆ. ಆದರೆ ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದಾಳೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್ಪಿ ಕೃಷ್ಣಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ವಿವೇಕಾನಂದ, ಪಿಎಸ್‌ಐ ವಿನೋದ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಆರೋಪಿ ಬಂಧನಕ್ಕೆ ಹುಡುಕಾಟ ಆರಂಭಿಸಿದ್ದು, ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.