ಕಲ್ಲೇ ಸೋಮನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ಸ್ವಾಮಿ ನೂತನ ದೇಗುಲವನ್ನು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಉದ್ಘಾಟಿಸಿದರು. ಗೋಪಾಲಸ್ವಾಮಿ, ಶಂಕರಪ್ಪ, ಮಹೇಶ್, ಭಾರತೀಶ್, ತಮ್ಮಯ್ಯ, ಪ್ರಕಾಶ್ ಗೌಡ, ಮೂರ್ತಿ, ಮಂಜುನಾಥ್, ಇದ್ದರು 
ಮಂಡ್ಯ

ಧಾರ್ಮಿಕ ಕೇಂದ್ರಗಳು ಮನಸ್ಸಿಗೆ ಸುಖ ಶಾಂತಿ ಕೊಡುವ ತಾಣಗಳಾಗಬೇಕು

ಎ. ಆರ್. ರಘುರಾಮ

ಬಾಗೂರು: ಧಾರ್ಮಿಕ ಕೇಂದ್ರಗಳು ಬಡವ ಶ್ರೀಮಂತ ಎನ್ನದೆ ಎಲ್ಲರ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಕೊಡುವ ತಾಣಗಳಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಸೋಮವಾರ ತಿಳಿಸಿದರು. ಹೋಬಳಿಯ ಕಲ್ಲೆಸೋಮನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ಸ್ವಾಮಿ ನೂತನ ದೇಗುಲ ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಹಣ ಐಶ್ವರ್ಯ ಎಲ್ಲವೂ ಇದ್ದು ನೆಮ್ಮದಿ ಇಲ್ಲದಂತಾಗಿದೆ ಪರಸ್ಪರ ಪ್ರೀತಿ ವಿಶ್ವಾಸದಿಂದ ನೆಮ್ಮದಿ ಸಾಧ್ಯ ದ್ವೇಷದಿಂದ ನೆಮ್ಮದಿ ಕೆಡುತ್ತದೆ ಆದ್ದರಿಂದ ದ್ವೇಷ ಅಸೂಯೆ ಬಿಟ್ಟು ಶಾಂತಿ ನೆಮ್ಮದಿಯಿಂದ ಜೀವನ ನಡೆಸಿದರೆ ಜೀವನದಲ್ಲಿ ಮುಕ್ತಿ ಸಿಗುತ್ತದೆ ಇದನ್ನು ಸರಿಪಡಿಸಲು ಧರ್ಮ ಅಧ್ಯಾತ್ಮ ಕೇಂದ್ರಗಳು ಅಗತ್ಯವಿವೆ ಎಂದರು. ದೇಗುಲದ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಿ ಬಸವಣ್ಣ ದೇವರ ದೇಗುಲ ಅಭಿವೃದ್ಧಿಯಾಗುತ್ತದೆ ಎಂದರು. ಸಂಸದ ಶ್ರೇಯಸ್ ಎಂ ಪಟೇಲ್ ಮಾತನಾಡಿ ಕಲ್ಲೇ ಸೋಮನಹಳ್ಳಿಗೆ ಸಮುದಾಯ ಭವನ ಮಾಡಿಸುವ ಭರವಸೆ ನೀಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಎ. ಗೋಪಾಲಸ್ವಾಮಿ ಮಾತನಾಡಿ ಹಳ್ಳಿಗಳಲ್ಲಿ ರೈತರು ದ್ವೇಷ ಅಸೂಯೆ ಬಿಟ್ಟು ಒಗ್ಗಟ್ಟಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಹಳ್ಳಿ ಅಭಿವೃದ್ಧಿಪಡಿಸಿಕೊಳ್ಳಿ ಎಂದು ತಿಳಿಸಿದರು. ಸಮಾರಂಭದಲ್ಲಿ ತಹಸಿಲ್ದಾರ್ ಜಿ. ಎನ್. ಶಂಕರಪ್ಪ, ಕಾಂಗ್ರೆಸ್ ಮುಖಂಡ ಹಾಸನ ಮಹೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪಿ. ಪ್ರಕಾಶ್ ಗೌಡ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ. ಎನ್. ಮಂಜುನಾಥ್, ಆರ್ ಐ ಪ್ರೇಮ್ ರಾಜ್, ಉದ್ಯಮಿ ವೆಂಕಟೇಗೌಡ, ಗ್ರಾಮ ಪಂಚಾಯಿತಿ ಸದಸ್ಯಕೆ. ಎನ್. ಭಾರತೀಶ್, ಮುಖಂಡರುಗಳಾದ ತಮ್ಮಯ್ಯ, ಪಟೇಲ್ ರಂಗೇಗೌಡ, ಪಟೇಲ್ ರಾಜಣ್ಣ, ಎಚ್.ಟಿ. ಶಿವಪ್ಪ, ಬಸವರಾಜು, ಸಿ. ಮಂಜುನಾಥ್, ಮೃತ್ಯುಂಜಯ, ಲಕ್ಷ್ಮಿ ಗೌಡ, ರಾಮೇಗೌಡ, ಚಂದ್ರಶೇಖರ್, ಶಿಲ್ಪಿ ದತ್ತಾತ್ರೇಯ, ಆನಂದ್, ತಮ್ಮೇಗೌಡ, ಪಾಂಡುರಂಗ, ಶಿವೇಗೌಡ, ಹಾಜರಿದ್ದರು.