ಶ್ರೀರಂಗಪಟ್ಟಣ ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಮನೆಯ ಛಾವಣಿ ಹಾನಿಯಾಗಿದೆ.
ಶ್ರೀರಂಗಪಟ್ಟಣ: ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಯೊಂದರ ಶೀಟುಗಳು ಹಾರಿ ಹೋಗಿದ್ದು, ವಾಹನ ಜಖಂಗೊಂಡಿದೆ.
ಗ್ರಾಮದ ವೃದ್ಧೆ ಬಿ.ಟಿ.ವಿಜಯಾ ವಾಸವಿದ್ದ ಮನೆಯ ಛಾವಣಿ ಸಂಪೂರ್ಣ ಹಾರಿ ಹೋಗಿದ್ದು, ಮನೆಯೊಳಗಿದ್ದ ಗೃಹಪಯೋಗಿ ವಸ್ತುಗಳು, ಆಹಾರ ಪದಾರ್ಥಗಳು ಮಳೆ ನೀರಿನಿಂದ ಹಾನಿಯಾಗಿವೆ. ತಕ್ಷಣ ಅಕ್ಕ-ಪಕ್ಕದ ನಿವಾಸಿಗಳು ಸಹಾಯಕ್ಕೆ ಮುಂದಾಗಿ ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ. ವಿಚಾರ ತಿಳಿದು ರಾಜಸ್ವ ನೀರಿಕ್ಷಕ ಭಾಸ್ಕರ್ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಹಾನಿಗೊಂಡಿದ್ದ ಮನೆಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.