ಮಂಡ್ಯ ನಗರದ ಆರ್‌ಎಪಿಸಿಎಂಎಸ್ ಆವರಣದ ಸಮೀಪ ಹಾಪ್‌ಕಾಮ್ಸ್ ನೂತನ ಮಾರಾಟ ಮಳಿಗೆಯನ್ನು ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯು.ಸಿ.ಶೇಖರ್ ಉಮ್ಮಡಹಳ್ಳಿ ಉದ್ಘಾಟಿಸಿದರು.
- ಆರ್‌ಎಪಿಸಿಎಂಎಸ್ ಆವರಣದ ಸಮೀಪ ಹಾಪ್‌ಕಾಮ್ಸ್ ನೂತನ ಮಾರಾಟ ಮಳಿಗೆ ಉದ್ಘಾಟನೆ
ಮಂಡ್ಯ: ರೈತರು ಹಾಗೂ ಗ್ರಾಹಕರ ಸಂಪರ್ಕ ಕೊಂಡಿಯಾಗಿ ಹಾಪ್‌ಕಾಮ್ಸ್ ಸಂಸ್ಥೆಯು ಸೇವೆ ಸಲ್ಲಿಸುತ್ತಿದೆ ಎಂದು ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯು.ಸಿ.ಶೇಖರ್ ಉಮ್ಮಡಹಳ್ಳಿ ಅಭಿಪ್ರಾಯಪಟ್ಟರು.
ನಗರದ ಆರ್‌ಎಪಿಸಿಎಂಎಸ್ ಆವರಣದ ಸಮೀಪ ಹಾಪ್‌ಕಾಮ್ಸ್ ನೂತನ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸುವ ಹಾಗೂ ಗ್ರಾಹಕರಿಗೆ ನಿಖರ ತೂಕ, ಕರಾರುವಕ್ಕಾದ ಬೆಲೆ, ತಾಜಾ ಹಣ್ಣು ತರಕಾರಿ ಡ್ರೈಫ್ರೂಟ್ಸ್ ಮಾರಾಟ ಮಾಡುವ ಉದ್ದೇಶದಿಂದ ಹಾಪ್‌ಕಾಮ್ಸ್ ಪ್ರಾರಂಭಿಸಲಾಯಿತು. ಜಿಲ್ಲಾದ್ಯಂತ ಮತ್ತಷ್ಟು ಹೊಸ ಮಾರಾಟ ಮಳಿಗೆ ಸ್ಥಾಪಿಸಲಾಗುವುದು. ಜತೆಗೆ ಆಧುನಿಕ ಮಾದರಿಯ ಸಂಸ್ಕರಿತ ಪದಾರ್ಥಗಳ ತಯಾರಿಕಾ ಘಟಕ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ. ಅದಷ್ಟು ಬೇಗ ಈ ಉದ್ದೇಶಿತ ಕಾಮಗಾರಿ ಪ್ರಾರಂಭಿಸಲು ಎಲ್ಲರ ಸಹಕಾರ ಪಡೆದು ಮುಂದುವರೆಯುತ್ತಿರುವುದಾಗಿ ತಿಳಿಸಿದರು.
ಹಾಪ್‌ಕಾಮ್ಸ್ ಉಪಾಧ್ಯಕ್ಷ ಭೋಜನಾಯಕ್, ನಿರ್ದೇಶಕರಾದ ಎಸ್.ನಾಗೇಂದ್ರ, ಕೆ.ಜಿ.ತಮ್ಮಣ್ಣ, ಸಿದ್ದರಾಮೇಗೌಡ, ಕೆ.ಎನ್.ಕೃಷ್ಣೇಗೌಡ, ಪುಟ್ಟಬಸವೇಗೌಡ, ಮಹೇಶ್, ಎಂ.ಡಿ.ಪ್ರಕಾಶ್, ಆರ್‌ಎಪಿಸಿಎಂಎಸ್ ನಿರ್ದೇಶಕರಾದ ಕೆ.ಸಿ.ರವೀಂದ್ರ, ಸಿ.ಕೆ.ಪಾಪಯ್ಯ, ಉದಯ್‌ಕುಮಾರ್, ಶ್ರೀಧರ್, ಯೋಗೇಶ್ ಹೊಳಲು, ಪಿಎಲ್‌ಡಿ ಬ್ಯಾಂಕ್‌ನ ಯೋಗೇಶ್, ಸಂಘದ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪ್ರದೀಪ್‌ಕುಮಾರ್, ಶಂಕರ್ ಇತರರಿದ್ದರು.