ಐಎಫ್‌ಎಸ್ ಪರೀಕ್ಷೆಲ್ಲಿ 122ನೇ ಶ್ರೇಣಿಯಲ್ಲಿ ಉತ್ತೀರ್ಣನಾದ ಅಭಿಷೇಕ್ ನಾಯಕ್ ಅವರನ್ನು ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ಸನ್ಮಾನಿಸಿದರು. ಎಸ್.ಪ್ರಕಾಶ್, ಎಸ್.ಟಿ.ರಾಜು, ಶ್ರೀನಿವಾಸ್, ನಿಂಗರಾಜು, ಜಯಲಕ್ಷ್ಮೀ ಇತರರು ಇದ್ದರು. 
ಮಂಡ್ಯ

ಐಎಫ್‌ಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿದವನಿಗೆ ಸನ್ಮಾನ

ಅಭಿನಯ್ ಎಚ್.ಎಂ
ಶ್ರೀರಂಗಪಟ್ಟಣ: ಐಎಫ್‌ಎಸ್ ಪರೀಕ್ಷೆಯಲ್ಲಿ 122ನೇ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆಗೈದ ಅಭಿಷೇಕ್ ನಾಯಕ್ ಅವರಿಗೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಪಟ್ಟಣ ಸಮೀಪದ ಗಂಜಾಂ ನಿವಾಸಿ ಹಾಗೂ ಪುರಸಭಾ ಮಾಜಿ ಸದಸ್ಯ ಶಿವು ಮತ್ತು ರಾಜೇಶ್ವರಿ ಅವರ ದ್ವಿತೀಯ ಪುತ್ರ ಅಭಿಷೇಕ್ ನಾಯಕ್ ಅವರ ನಿವಾಸಕ್ಕೆ ಸೋಮವಾರ ಎಸ್.ಸಚ್ಚಿದಾನಂದ ಭೇಟಿ ನೀಡಿ ಪೇಟ ತೊಡಿಸಿ ಹೂಮಾಲೆ ಹಾಕಿ ಗೌರವಪೂರಕವಾಗಿ ಅಭಿನಂದಿಸಿದರು.
ಭಾರತದ ಅತ್ಯುನ್ನತ ಸರ್ಕಾರಿ ಸೇವೆಗಳಿಗೆ ಪ್ರಸಕ್ತ ಸಾಲಿಗೆ ನಡೆಸಿದ ಭಾರತೀಯ ಅರಣ್ಯ ಸೇವಾ (ಐಎಫ್‌ಎಸ್) ಪರೀಕ್ಷೆಯಲ್ಲಿ ಶ್ರೀರಂಗಪಟ್ಟಣದ ಗಂಜಾಂ ನಿವಾಸಿ ಅಭಿಷೇಕ್ ನಾಯಕ್ ಅವರು 122ನೇ ಶ್ರೇಣಿ ಪಡೆದಿದ್ದು, ಅವರ ಕಠಿಣ ಪರಿಶ್ರಮ ಮತ್ತು ಪ್ರಯತ್ನದ ಮೂಲಕ ಉನ್ನತ ಮಟ್ಟದ ಸ್ಥಾನ ಗಳಿಸುವ ಮೂಲಕ ಯಶಸ್ಸು ಸಾಧಿಸಿದ್ದಾರೆ. ಅಭಿಷೇಕ್ ನಾಯಕ್ ಅವರು ಉನ್ನತ ಮಟ್ಟದ ಸ್ಥಾನಗಳಿಸಿ ಸಾಧನೆಯೊಂದಿಗೆ ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿರುವುದು ತಾಲೂಕು ಮತ್ತು ಅವರ ಪಾಲಕರಿಗೆ ಹೆಮ್ಮೆಯ ವಿಚಾರ ಎಂದು ಎಸ್.ಸಚ್ಚಿದಾನಂದ ಶ್ಲಾಘಿಸಿದರು.
ಪುರಸಭಾ ಮಾಜಿ ಸದಸ್ಯರಾದ ಎಸ್.ಪ್ರಕಾಶ್, ಎಸ್.ಟಿ.ರಾಜು, ಶ್ರೀನಿವಾಸ್, ನಿಂಗರಾಜು, ಜಯಲಕ್ಷ್ಮೀ, ಬಿಜೆಪಿ ನಗರ ಘಟಕ ಅಧ್ಯಕ್ಷ ಸುಧಾಕರ್, ಪ್ರಭಾಕರ್ ಗುಪ್ತ, ಮುಖಂಡರಾದ ಇ.ಪ್ರಕಾಶ್, ಜಗದೀಶ್, ಶೇಖರ್, ಚಂದ್ರಶೇಖರ್, ಮಹಿಳಾ ನಾಯಕಿಯರಾದ ಮಂಜುಳಾ, ಪ್ರಿಯಾ ರಮೇಶ್ ಇತರರಿದ್ದರು.