ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯ ರಾಜಶೇಖರ್ ಮಾತನಾಡಿದರು.
- ಜ.24ರಂದು ಬೃಹತ್ ಹಿಂದು ಸಮಾಜೋತ್ಸವ
- ನಗರದ ಗುತ್ತಲಿನಲ್ಲಿ ಕಾರ್ಯಕ್ರಮ
- ಹಿಂದು ಸಮಾಜೋತ್ಸವ ಸಮಿತಿಯಿಂದ ಆಯೋಜನೆ
ಮಂಡ್ಯ: ಹಿಂದು ಸಮಾಜೋತ್ಸವ ಆಯೋಜನಾ ಸಮಿತಿಯ ವತಿಯಿಂದ ಜ.24ರಂದು ಬೃಹತ್ ಹಿಂದು ಸಮಾಜೋತ್ಸವ ಮತ್ತು ಶೋಭಾಯಾತ್ರೆಯನ್ನು ನಗರದ ಗುತ್ತಲಿನಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯ ರಾಜಶೇಖರ್ ತಿಳಿಸಿದರು.
ಹಿಂದೂ ಧರ್ಮದ ಉಳಿವು, ಮೌಲ್ಯತೆಯ ಜಾಗೃತಿ ಹೆಚ್ಚಿಸುವ ಸಲುವಾಗಿ ಸಮಾಜೋತ್ಸವ ಆಯೋಜಿಸಿಲಾಗಿದೆ. ಅಂದು ಮಧ್ಯಾಹ್ನ 3.30ಕ್ಕೆ ಶೋಭಾಯಾತ್ರೆ ನಡೆಯಲಿದೆ. ಸಂಜೆ 4.45ಕ್ಕೆ ಸಮಾಜೋತ್ಸವದ ಸಭಾ ಕಾರ್ಯಕ್ರಮವು ಕುವೆಂಪು ಶಾಲೆ ಆವರಣದಲ್ಲಿ ನೆರವೇರಲಿದೆ. ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಸ್ತಬ್ಧ ಚಿತ್ರಗಳ ಮೆರವಣಿಗೆ ಮಾಡಲಾಗುವುದು. ಬೇಬಿ ಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಶಿವಬಸಪ್ಪಸ್ವಾಮೀಜಿ ಮೆರವಣಿಗೆ ಚಾಲನೆ ನೀಡುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಿಂದೂ ಧರ್ಮದ ವಾಗ್ಮಿ ನವೀನ್ ಸುಬ್ರಮಣ್ಯ ಸಮಾಜದ ಏಕತೆ, ರಕ್ಷಣೆ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ 1500ಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಧರ್ಮಿಯರು ಭಾಗವಹಿಸುವಂತೆ ಮನವಿ ಮಾಡಿದರು.
ದೊಡ್ಡಾಚಾರ್ಯ, ದಾಮೋದರ ಶೆಣೈ, ರಾಕೇಶ್, ನಂದೀಶ್ ಇದ್ದರು.