ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹಣ್ಣುಹಂಪಲು ವಿತರಿಸಿದರು. ಎಸ್.ಎ.ಮಲ್ಲೇಶ್, ಡಿ.ಶ್ರೀನಿವಾಸ್, ರಾಮಕೃಷ್ಣೇಗೌಡ, ವಿ.ಎಸ್.ನಿಂಗೇಗೌಡ ಇತರರಿದ್ದರು. 
ಮಂಡ್ಯ

ನಾಡಿಗೆ ಎಚ್‌ಡಿಡಿ ಕೊಡುಗೆ ಅಪಾರ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿಕೆ
  • ಎಚ್.ಡಿ.ದೇವೇಗೌಡರ ಹುಟ್ಟುಹಬ್ಬ ಆಚರಣೆ
ಪಾಂಡವಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಜೆಡಿಎಸ್ ಮುಖಂಡರು ಮತ್ತು ಸಿ.ಎಸ್.ಪುಟ್ಟರಾಜು ಅಭಿಮಾನಿಗಳು ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು.
ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಹುಟ್ಟು ಹೋರಾಟಗಾರರಾದ ಎಚ್.ಡಿ.ದೇವೇಗೌಡರು ರೈತರು, ದುರ್ಬಲರು, ಅಲ್ಪಸಂಖ್ಯಾತರು, ದೀನದಲಿತರ ಪರವಾಗಿ ಚಿಂತಿಸುವ ನಾಯಕರಾಗಿದ್ದಾರೆ. ಪ್ರಧಾನಿಯಾಗಿ ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಆರಿಸಿದ ನಾಡಿನ ಏಕೈಕ ಕನ್ನಡಿಗ, ಪ್ರಧಾನಮಂತ್ರಿ, ಮುಖ್ಯಮಂತ್ರಿಯಾಗಿ ರಾಷ್ಟ್ರ ಮತ್ತು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ನೀರಾವರಿ, ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತುಕೊಟ್ಟಿದ್ದಾರೆ ಎಂದರು.
94 ವರ್ಷವಾದರೂ ಇಂದಿಗೂ ಅವರಲ್ಲಿ ಹೋರಾಟ ಮನೋಭಾವ ಕಡಿಮೆಯಾಗಿಲ್ಲ. ರಾಜ್ಯ ಪರಿಷತ್‌ನಲ್ಲಿ ನಿಂತು ನಾಡಿನ ಪರವಾಗಿ, ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ. ಇವರ ಸೇವೆ ನಾಡು, ರಾಷ್ಟ್ರಕ್ಕೆ ಇನ್ನೂ ಬೇಕಿದೆ. ಅವರಿಗೆ ಮತ್ತಷ್ಟು ಆಯಸ್ಸು ಆರೋಗ್ಯ ಕೊಟ್ಟಿ ಕಾಪಾಡಲೆಂದು ಶುಭಹಾರೈಸಿದರು.
ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಡಿ.ಶ್ರೀನಿವಾಸ್,ನಿರ್ದೇಶಕರಾದ ರಾಮಕೃಷ್ಣೇಗೌಡ, ವಿ.ಎಸ್.ನಿಂಗೇಗೌಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗುರುಸ್ವಾಮಿ, ಮುಖಂಡರಾದ ಎಚ್.ಸಿ.ಕೃಷ್ಣೇಗೌಡ ಪಟೇಲ, ಪುರಸಭೆ ಮಾಜಿ ಸದಸ್ಯ ಆರ್.ಸೋಮಶೇಖರ್, ಮಾಣಿಕ್ಯನಹಳ್ಳಿ ಅಶೋಕ್, ಅಲ್ಪಳ್ಳಿಗೋವಿಂದಯ್ಯ, ಟೌನ್ ಚಂದ್ರು, ಪ್ರಶಾಂತ್, ಅರ್ಮುಗಂ, ಗುರು ಇತರರು ಇದ್ದರು.