ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದಲ್ಲಿ ನಡೆದ ಹನುಮಂತೋತ್ಸವದಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು. 
ಮಂಡ್ಯ

ಮಾದಾಪುರ ಗ್ರಾಮದಲ್ಲಿ ಹನುಮಂತೋತ್ಸವ

ಕಿಕ್ಕೇರಿ : ಹೋಬಳಿಯ ಗಡಿಭಾಗದ ಮಾದಾಪುರ ಗ್ರಾಮದಲ್ಲಿ ವಿಪ್ರ ಸೋಷಿಯೇಷನ್‌ನಿಂದ ಇತ್ತೀಚೆಗೆ ಹನುಮಂತ ದೇವರ ಉತ್ಸವ ಅದ್ದೂರಿಯಾಗಿ ನಡೆಯಿತು.
ಉತ್ಸವಕ್ಕೂ ಮುನ್ನ ಹನುಮ ದೇವರಿಗೆ ಅಷ್ಠಾವಧಾನ, ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಹನುಮ ದೇವರ ಭಾವಚಿತ್ರದೊಂದಿಗೆ ಶ್ರದ್ಧಾಭಕ್ತಿಯಿಂದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು.
ಕೆಂಪು, ಹಳದಿ, ಹಸಿರು, ನೀಲಿ ಮತ್ತಿತರ ಬಣ್ಣದ ನೀರು ಎರಚಾಡಿದರು. ಹಲವರು ಬಣ್ಣವನ್ನು ಪರಸ್ಪರ ಬಳಿದುಕೊಂಡು ಎರಚಾಡಿಕೊಂಡು ಹನುಮದೇವರ ಉತ್ಸವದ ಮುಂದೆ ಉತ್ಸಾಹದಿಂದ ತಾ ಮುಂದು ನಾ ಮುಂದು ಎಂದು ಸಾಗಿದರು.
ಮನೆಗಳ ಮುಂದೆ ಓಕುಳಿಯಾಡಲು ಸಿದ್ದವಾಗಿ ಇಟ್ಟಿದ್ದ ಬಣ್ಣದ ನೀರು, ಬಣ್ಣವನ್ನು ಪರಸ್ಪರ ಪೈಪೋಟಿಯಲ್ಲಿ ತೆಗೆದುಕೊಂಡು ಪರಸ್ಪರ ಎರಚಾಡಿಕೊಂಡರು. ಪರೀಕ್ಷೆ ಮುಗಿದು ಬೇಸಿಗೆ ರಜೆಯ ಕಾರಣ ಮಕ್ಕಳಿಗೆ ಹೊಸ ಆಟದಂತೆ ಹನುಮಂತೋತ್ಸವ ಕಂಡು ಬಂದರೆ, ಅಜ್ಜ ಅಜ್ಜಂದಿರು ಮೊಮ್ಮಕ್ಕಳ ಬಣ್ಣದ ವೇಷ ಕಂಡು ಒಳಗೊಳಗೆ ಖುಷಿಪಟ್ಟರು.
ಇಡೀ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಉತ್ಸವ ವೀಕ್ಷಿಸಲು ಸುತ್ತಮುತ್ತಲ ಗ್ರಾಮದ ಜನರು ಆಗಮಿಸಿದ್ದರು. ಉತ್ಸವದ ಆಚರಣೆ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಂ.ಎನ್.ನಾಗರಾಜು, ಎಂ.ಎನ್.ಸುಬ್ರಹ್ಮಣ್ಯ, ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಎಂ.ಕೆ. ಸುರೇಶ್, ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಎಂ.ವಿ. ರಮೇಶ್, ಎಂ.ಎ. ಸೋಮಶೇಖರ್, ಎಂ.ಕೆ.ಶ್ರೀಕಾಂತ್, ಎಂ.ಎಲ್.ಕೃಷ್ಣಕುಮಾರ್, ದೀಪು, ಮಂಜುನಾಥ್, ಗಣೇಶ್, ಸೋಮಣ್ಣ, ಶ್ರೀಧರ್, ಅರ್ಜುನ್ ಮತ್ತಿತರರಿದ್ದರು.