ಪಟ್ಟಣ ಪೋಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಕಳುವಾಗಿದ್ದ ಹತ್ತಕ್ಕೂ ಹೆಚ್ಚು ಮೊಬೈಲ್ ಗಳನ್ನು ಪೊಲೀಸರು ಮಾಲೀಕರಿಗೆ ಹಿಂದಿರುಗಿಸಿದರು.ಬಿ.ಜಿ.ಕುಮಾರ್, ಗಂಗಾಧರ್ ಇತರರಿದ್ದರು. 
ಮಂಡ್ಯ

ವಾರಸುದಾರರಿಗೆ ಮೊಬೈಲ್ ಹಸ್ತಾಂತರ

ಶ್ರೀರಂಗಪಟ್ಟಣ: ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಕಳುವಾಗಿದ್ದ ಸುಮಾರು 1.63 ಲಕ್ಷ ಬೆಲೆಯ ಹತ್ತಕ್ಕೂ ಹೆಚ್ಚು ಮೊಬೈಲ್ ಗಳನ್ನು ಪೊಲೀಸರು ಪತ್ತೆ ಹಚ್ಚಿ,ಮಾಲೀಕರಿಗೆ ಹಿಂದಿರುಗಿಸಿದರು.
ಟೌನ್ ಠಾಣೆ ಇನ್ ಸ್ಪೆೆಕ್ಟರ್ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಪೊಲೀಸ್ ತಂಡ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಈ ವೇಳೆ ಪಿಎಸೈಗಳಾದ ಜಾನಾಬಾಯಿ, ಗಂಗಾಧರ್ ಹಾಗೂ ಸಿಬ್ಬಂದಿ ಚಂದ್ರು, ಅಭಿ,ಮಂಜು ಇತರರಿದ್ದರು.