ಮದ್ದೂರು ತಾಲೂಕಿನ ವಳಗೆರೆಹಳ್ಳಿ ಕಾರ್ಯ ಕ್ಷೇತ್ರದಲ್ಲಿ ವಾತ್ಸಲ್ಯ ಫಲಾನುಭವಿ ಕಾಳಮ್ಮ ಅವರಿಗೆ ವಾತ್ಸಲ್ಯಮನೆ ಹಸ್ತಾಂತರ ಮಾಡಲಾಯಿತು. ಜಯಂತ ಪೂಜಾರಿ, ವಿ.ಸಿ.ಉಮಾಶಂಕರ್, ಎಂ.ಚೇತನಾ, ಎಂ.ಎ.ಹಾಲಪ್ಪ, ಶ್ವೇತಾ ಇದ್ದರು.
- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
- ವಾತ್ಸಲ್ಯ ಕಾರ್ಯಕ್ರಮದಡಿ ರಚಿಸಿದ ವಾತ್ಸಲ್ಯಮನೆ
ಮದ್ದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಾರ್ಯಕ್ರಮದಡಿ ರಚಿಸಿದ ವಾತ್ಸಲ್ಯಮನೆಯನ್ನು ತಾಲೂಕಿನ ಶಂಕರಪುರ ವಲಯದ ವಳಗೆರೆಹಳ್ಳಿ ಕಾರ್ಯಕ್ಷೇತ್ರದಲ್ಲಿ ವಾತ್ಸಲ್ಯ ಫಲಾನುಭವಿ ಕಾಳಮ್ಮ ಅವರಿಗೆ ಹಸ್ತಾಂತರ ಮಾಡಲಾಯಿತು.
ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಕಲ್ಪನೆಯಂತೆ ವಾತ್ಸಲ್ಯ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 5ನೇ ಮನೆ ಹಸ್ತಾಂತರ ಮಾಡುತ್ತಿರುವುದು ಪ್ರಶಂಸನೀಯ ಸಂಗತಿ ಎಂದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯು ಶೈಕ್ಷಣಿಕ, ಆರ್ಥಿಕ ಸಬಲೀಕರಣ, ಸಾಮಾಜಿಕವಾಗಿ ಅನೇಕ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಮಾಜದಲ್ಲಿರುವ ನಿರ್ಗತಿಕ ಫಲಾನುಭವಿಗಳನ್ನು ಗುರುತಿಸಿ ಅವರ ಜೀವನಕ್ಕೆ ಬೆಳಕಾಗುತ್ತಿರುವುದು ಶ್ಲಾಘನೀಯ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕಿ ಎಂ.ಚೇತನಾ, ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಲಿಂಗೇಗೌಡ, ಯೋಜನಾಧಿಕಾರಿ ಎಂ.ಎ.ಹಾಲಪ್ಪ, ಜಿಲ್ಲಾ ಸಮನ್ವಯಾಧಿಕಾರಿ ಶ್ವೇತಾ, ಗ್ರಾಪಂ ಸದಸ್ಯ ಶಿವಲಿಂಗಯ್ಯ, ಒಕ್ಕೂಟದ ಅಧ್ಯಕ್ಷೆ ಉಮಾ, ಪದಾಧಿಕಾರಿ ಅರುಣ್ ಇತರರಿದ್ದರು.