ಶಿಂಷಾ ನದಿಯಿಂದ ಸಂಪ್ರದಾಯದಂತೆ ಸ್ವರ್ಣ ಗೌರಿಯನ್ನು ಬೃಹನ್ಮಠಕ್ಕೆ ತರುತ್ತಿರುವುದು.
ಹಲಗೂರು: ಇಲ್ಲಿನ ಮಠದ ಬೀದಿಯಲ್ಲಿರುವ ಬೃಹನ್ಮಠದಲ್ಲಿ ಸ್ವರ್ಣ ಗೌರಿಗೆ ಮುತ್ತೈದೆಯರು ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಮುತ್ತೈದೆಯರು ಅರಿಶಿಣ, ಕುಂಕುಮ ನೀಡಿ ವಿಶೇಷವಾಗಿ ಪೂಜೆ ಸಲ್ಲಿಸಿ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವಂತೆ ಸ್ವರ್ಣಗೌರಿಯಲ್ಲಿ ಪ್ರಾರ್ಥಿಸಿದರು.
ಸೋಮವಾರ ಶಿಂಷಾ ನದಿಯ ದಡದಲ್ಲಿ ಪ್ರಾಂತಃಕಾಲದಲ್ಲಿ ಅರಿಶಿಣ ಮತ್ತು ಮರಳಿನಿಂದ ತಯಾರಿಸಿದ ಸ್ವರ್ಣ ಗೌರಿಯನ್ನು ತಂದು ಹಲಗೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ಹಲಗೂರಿನ ಬೃಹನ್ಮಠಕ್ಕೆ ತಂದಾಗ ಮುತ್ತೈದೆಯರು ಆರತಿ ಎತ್ತಿ ವಿಶೇಷವಾಗಿ ಪೂಜೆ ಸಲ್ಲಿಸಿ ಸ್ವರ್ಣ ಗೌರಿಯನ್ನು ಬರಮಾಡಿಕೊಂಡರು.
ಸ್ಥಳೀಯರಾರ ತೋಂಟದಾರ್ಯ ನಾಗೇಂದ್ರ ಮಾತನಾಡಿ, ಸೆಪ್ಟೆಂಬರ್ 22ರಂದು ಸ್ವರ್ಣಗೌರಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಶಿಂಷಾನದಿಯಲ್ಲಿ ವಿಸರ್ಜಿಸಲಾಗುತ್ತದೆ ಎಂದು ತಿಳಿಸಿದರು.