ಹಲಗೂರು ನಲ್ಲಿ ಬೆಂಕಿ ಹೆಚ್ಚು ಹರಡದಂತೆ ತಡೆಯುತ್ತಿರುವ ಅಗ್ನಿಶಾಮಕದ ಸಿಬ್ಬಂದಿ. 
ಮಂಡ್ಯ

ಬೆಂಕಿಗೆ ಮರ, ಗಿಡಗಳು ನಾಶ

ಎ. ಆರ್. ರಘುರಾಮ
ಹಲಗೂರು: ಗ್ರಾಮದಲ್ಲಿ ಪ್ರತ್ಯೇಕ ಎರಡು ಕಡೆಗಳಲ್ಲಿ ಬೆಂಕಿ ಬಿದ್ದು ಐದಾರು ಎಕರೆ ಭೂ ಪ್ರದೇಶದಲ್ಲಿದ್ದ ಸಣ್ಣಪುಟ್ಟ ಗಿಡಗಳು ಸುಟ್ಟು ಕರಕಲಾಗಿವೆ.
ಹಲಗೂರು ಕೆರೆ ಕೋಡಿ ಅಂಚಿನಲ್ಲಿರುವ ಪಟ್ಟಲದಮ್ಮ ದೇವಸ್ಥಾನದ ಹಿಂಭಾಗದ 4 ಎಕರೆ ಭೂ ಪ್ರದೇಶಕ್ಕೆ ಬೆಂಕಿ ತಗುಲಿ, ಸಮೀಪದ ಜಮೀನಿನಲ್ಲಿ ಬೆಳೆದಿದ್ದ ಸೌತೆಕಾಯಿ ಬೆಳೆ ನಾಶವಾಗಿದೆ. ಕಸದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಈ ಅವಗಢ ಸಂಭವಿಸಿದೆ. ಚೌಕಿ ಮಠದವರೆಗೆ ಗಿಡ ಮರಗಳಿಗೆ ಹಬ್ಬಿದ್ದ ಬೆಂಕಿಯನ್ನು ನಂದಿಸುವಲ್ಲಿ
ಮಳವಳ್ಳಿ ಪಟ್ಟಣದಿಂದ ಧಾವಿಸಿ ಬಂದ ಅಗ್ನಿ ಶಾಮಕ ವಾಹನ ಮತ್ತು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಹಲಗೂರು ವ್ಯಾಪ್ತಿಯಲ್ಲಿ ಅಗ್ನಿ ಅವಘಡಗಳು ಆಗಾಗ್ಗೆ ಸಂಭವಿಸುತ್ತಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸುತ್ತಲೇ ಇರುತ್ತದೆ. ಬಸವನಬೆಟ್ಟ, ಮುತ್ತತ್ತಿ ಅರಣ್ಯ ಪ್ರದೇಶಗಳು ಇದೇ ವ್ಯಾಪ್ತಿಯಲ್ಲಿ ಇದ್ದು, ಹಲಗೂರಿನಲ್ಲಿ ಅಗ್ನಿ ಶಾಮಕ ಠಾಣೆ ತೆರೆಯಲು ಸರ್ಕಾರ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಸಿದ್ದರಾಮಯ್ಯ, ಮೋಹನ್ ಕುಮಾರ, ಗಗನ್ ಪಾಲ್ಗೊಂಡಿದ್ದರು.