ಮಂಡ್ಯ ನಗರದ ಹೌಸಿಂಗ್ ಬೋರ್ಡ್‌ನಲ್ಲಿ ನಿರ್ಮಾಣವಾಗಿರುವ ಹೈಟೆಕ್ ಕ್ರೀಡಾಂಗಣ.
- ನಿರ್ಮಿತಿ ಕೇಂದ್ರದಿಂದ ಕಾಮಗಾರಿ
- ಶಾಸಕ ರವಿಕುಮಾರ್ ಕನಸಿನ ಯೋಜನೆ
ಮಂಡ್ಯ: ಕ್ರೀಡಾಪಟುಗಳಿಗೆ ಅನುಕೂಲವಾಗಲೆಂದು ನಗರದ ಹೌಸಿಂಗ್ ಬೋರ್ಡ್‌ನಲ್ಲಿ ಅಂದಾಜು ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಗ್ರೀನ್‌ಮ್ಯಾಟ್ ಕ್ರೀಡಾಂಗಣ ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ. ಕೊನೆ ಹಂತದ ಸಣ್ಣಪುಟ್ಟ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಕ್ರೀಡಾಪಟುಗಳ ಬಳಕೆಗೆ ಲಭ್ಯವಾಗಲಿದೆ.
ಮಂಡ್ಯ ನಗರದ ಕ್ರೀಡಾಪಟುಗಳು ಬಹುವರ್ಷದ ಬೇಡಿಕೆಯಾಗಿದ್ದ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಕಳೆದ ವರ್ಷ ರಾಜ್ಯಸರ್ಕಾರ ಸ್ಪಂದನೆ ಸಿಕ್ಕಿತ್ತು. ಶಾಸಕ ರವಿಕುಮಾರ್ ಗಣಿಗ ಅವರ ಪ್ರಸ್ತಾವನೆಗೆ ಅನುಮೋದನೆ ದೊರಕಿತ್ತು. ಅದರಂತೆ ಹೌಸಿಂಗ್ ಬೋರ್ಡ್‌ನಲ್ಲಿ ಹೈಟೆಕ್ ಗ್ರೀನ್‌ಮ್ಯಾಟ್ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಇದು ಕ್ರಿಕೆಟ್ ಹಾಗೂ ಫುಟ್ಬಾಲ್ ಕ್ರೀಡೆಗೆ ಆದ್ಯತೆ ನೀಡಬಹುದು. ಅದೇ ರೀತಿ ಮುಂದಿನ ದಿನದಲ್ಲಿ ಬೇರೆ ಬೇರೆ ಕ್ರೀಡೆಗೂ ಬಳಸಿಕೊಳ್ಳಬಹುದು.
ನಗರದಲ್ಲಿ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣ ಮಾತ್ರ ಇದೆ. ಆದರೆ ಇಲ್ಲಿ ಎಲ್ಲ ಆಟೋಟಕ್ಕೆ ಬೇಕಾದ ಸೌಲಭ್ಯದ ಜತೆಗೆ ಜಾಗವೂ ಇಲ್ಲ. ಕ್ರಿಕೆಟ್ ಹಾಗೂ ಫುಟ್ಬಾಲ್ ಆಟಗಾರರ ನಡುವೆ ಆಗ್ಗಿಂದಾಗ್ಗೆ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಈ ನಡುವೆಯೂ ಕ್ರಿಕೆಟ್ ಆಟಗಾರರು ಮಂಡ್ಯ ವಿಶ್ವವಿದ್ಯಾನಿಲಯದ ಆವರಣ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು(ಕಲ್ಲುಕಟ್ಟಡ), ಮೈಷುಗರ್ ಪ್ರೌಢಶಾಲೆ ಕ್ರೀಡಾಂಗಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದಾಗ್ಯೂ ಸರ್‌ಎಂವಿ ಕ್ರೀಡಾಂಗಣ ಹೊರತುಪಡಿಸಿ ಸುಸಜ್ಜಿತ ಕ್ರೀಡಾಂಗಣದ ಅವಶ್ಯಕತೆ ಇತ್ತು. ಪ್ರತಿ ಬಾರಿ ಬಜೆಟ್‌ನಲ್ಲಿಯೂ ಇಂತಹದೊಂದು ಬೇಡಿಕೆ ಈಡೇರಬಹುದೆನ್ನುವ ನಿರೀಕ್ಷೆ ಇರುತ್ತಿತ್ತಾದರೂ ೋಷಣೆಯಾಗಿರಲಿಲ್ಲ. ಆದರೀಗ ಶಾಸಕ ರವಿಕುಮಾರ್ ಗಣಿಗ ಅವರ ಪ್ರಯತ್ನದ ಲವಾಗಿ ನಗರದ ಹೌಸಿಂಗ್ ಬೋರ್ಡ್‌ನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಿದೆ.
ಹೈಟೆಕ್ ಕ್ರೀಡಾಂಗಣ: ಹೌಸಿಂಗ್ ಬೋರ್ಡ್‌ನಲ್ಲಿ ನಿರ್ಮಾಣವಾಗಿರುವ ಹೈಟೆಕ್ ಕ್ರೀಡಾಂಗಣದಲ್ಲಿ ಹಲವು ಸೌಲಭ್ಯ ಕಲ್ಪಿಸಲಾಗುತ್ತಿದೆ. ಕ್ರೀಡಾಂಗಣದ ಸುತ್ತ ರಕ್ಷಣೆಗಾಗಿ ಗ್ರೀಲ್ ಅಳವಡಿಕೆ ಮಾಡಲಾಗಿದೆ. ಅಂತೆಯೇ ಗ್ರೀನ್‌ಮ್ಯಾಟ್ ಹಾಸು ಇದೆ. ಮಾತ್ರವಲ್ಲದೆ 50ಕ್ಕೂ ಹೆಚ್ಚು ್ಲಡ್‌ಲೈಟ್ ಹಾಕಲಾಗಿದೆ. ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಸೇರಿದಂತೆ ಎಲ್ಲ ರೀತಿಯ ಕ್ರೀಡೆಗೆ ಅನುಕೂಲವಾಗುವಂತೆ ಹೈಟೆಕ್ ಮಾದರಿಯಲ್ಲಿ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಕ್ರೀಡಾಂಗಣದ ಕಾಮಗಾರಿಯ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಂಡಿದ್ದು, ಯೋಜನಾ ನಿರ್ದೇಶಕ ಜಯಪ್ರಕಾಶ್ ನೇತೃತ್ವದಲ್ಲಿ ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಲಾಗಿದೆ. ಒಟ್ಟಾರೆ ಯುವ ಕ್ರೀಡಾಪಟುಗಳ ಬೇಡಿಕೆ ಕೊನೆಗೂ ಈಡೇರುತ್ತಿದ್ದು, ಇದರಿಂದಾಗಿ ಸಾವಿರಾರೂ ಯುವ ಸಮೂಹಕ್ಕೆ ಅನುಕೂಲವಾಗಲಿದೆ.
ಶಾಸಕ ರವಿಕುಮಾರ್ ಕನಸಿನ ಯೋಜನೆ
ಕ್ರೀಡಾಪಟುಗಳು ಬೇಡಿಕೆಯಂತೆ ಕ್ರೀಡಾಂಗಣ ನಿರ್ಮಾಣ ಮಾಡಬೇಕೆನ್ನುವ ನಿಟ್ಟಿನಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಯೋಜನೆ ರೂಪಿಸಿದರು. ಅದರಂತೆ ಕಾಮಗಾರಿಗೆ ಸಂಬಂಧಿಸಿದ ಪ್ರಕ್ರಿಯೆಗೂ ಚಾಲನೆ ನೀಡಿದರು. ಇನ್ನು ಕ್ರೀಡಾಂಗಣ ನಿರ್ಮಾಣಕ್ಕೆಂದು ಶಾಸಕ ರವಿಕುಮಾರ್ ಗಣಿಗ ಅವರು ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಅಂಕಿ ಅಂಶ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಆದರೆ ಇದೊಂದು ವಿಶೇಷ ಪ್ರಕರಣ. ಕಾರಣ, ಸಾಮಾನ್ಯವಾಗಿ ಅಂಕಿ ಅಂಶ ಇಲಾಖೆಯಲ್ಲಿ ಅನುದಾನ ಸಿಗಲ್ಲ ಎನ್ನುವ ಮಾತು ಕೇಳಿಬರುತ್ತದೆ. ಆದರೆ ಶಾಸಕರು ಈ ಬಗ್ಗೆ ಪರಿಶೀಲಿಸಿ ಅನುದಾನ ಪಡೆದುಕೊಂಡಿದ್ದಾರೆ.
ರಾಜ್ಯ ಸರ್ಕಾರ ಶಾಸಕರ ಅನುದಾನವನ್ನು ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಅಂಕಿ ಅಂಶ ಇಲಾಖೆಗೆ ಬಿಡುಗಡೆ ಮಾಡುತ್ತದೆ. ಈ ಇಲಾಖೆ ಅನುದಾನವನ್ನು ಬ್ಯಾಂಕ್‌ನಲ್ಲಿ ಜಮೆ ಮಾಡುತ್ತದೆ. ಈ ಅನುದಾನದ ಬಡ್ಡಿಯಿಂದ ಬಂದ ಹಣದ ಪೈಕಿ ಒಂದು ಕೋಟಿ ರೂ ಗಳನ್ನು ಕ್ರೀಡಾಂಗಣ ನಿರ್ಮಾಣಕ್ಕೆಂದು ಬಿಡುಗಡೆ ಮಾಡಿಸಿಕೊಳ್ಳಲಾಗಿದೆ.
ಫೆವಿಲಿಯನ್‌ಗೂ ಗ್ರೀನ್‌ಸಿಗ್ನಲ್
ಅಂದಾಜು ಒಂದು ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಗ್ರೀನ್‌ಮ್ಯಾಟ್ ಕ್ರೀಡಾಂಗಣಕ್ಕೆ ಗುಣಮಟ್ಟದ ಫೆವಿಲಿಯನ್ ಕೂಡ ಇರಬೇಕೆಂದು ಶಾಸಕ ರವಿಕುಮಾರ್ ಗಣಿಗ ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕಾಗಿ ಡಿಪಿಆರ್ ಸಿದ್ಧಪಡಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಈ ಕೆಲಸವೂ ತ್ವರಿತವಾಗಿ ಪೂರ್ಣಗೊಳ್ಳಲಿದೆ.
ಮಾದರಿ ಮಂಡ್ಯ ನಗರ ನಿರ್ಮಾಣ ನಮ್ಮ ಗುರಿ. ಈ ನಿಟ್ಟಿನಲ್ಲಿ ಗುಣಮಟ್ಟದ ಕ್ರೀಡಾಂಗಣ ಮಾಡಲಾಗುತ್ತಿದೆ. ಈಗಾಗಲೇ ಅಂದಾಜು 10 ಕೋಟಿ ರೂಗಳನ್ನು ಕ್ರೀಡಾ ಕ್ಷೇತ್ರಕ್ಕೆ ನೀಡಲಾಗಿದೆ. ಇದರ ಭಾಗವಾಗಿ ಹೌಸಿಂಗ್ ಬೋರ್ಡ್‌ನಲ್ಲಿ ಹೈಟೆಕ್ ಗ್ರೀನ್‌ಮ್ಯಾಟ್ ಕ್ರೀಡಾಂಗಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು. ಯುವ ಸಮೂಹ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತಹ ಯೋಜನೆ ರೂಪಿಸಲಾಗಿದೆ. ಮಂಡ್ಯ ನಗರದಲ್ಲಿ ನಾಲ್ಕು ಹೈಟೆಕ್ ಕ್ರೀಡಾಂಗಣ ಮಾಡಲಾಗುವುದು.