ಹಲಗೂರಿನಲ್ಲಿ ವಿದ್ಯಾ ಗಣಪತಿಯನ್ನು ವಿಸರ್ಜನೆ ಮಾಡಲು ವಿನಾಯಕ ಯುವಕಮಿತ್ರ ಮಂಡಳಿಯ ಸರ್ವ ಸದಸ್ಯರು ಭಾಗವಹಿಸಿರುವುದು.
ಹಲಗೂರು: ಇಲ್ಲಿನ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಯುವಕ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ ಸ್ವರ್ಣ ಗೌರಿ ಸಮೇತ ವಿನಾಯಕ ಮೂರ್ತಿಯನ್ನು ಶುಕ್ರವಾರ ವಿಸರ್ಜಿಸಲಾಯಿತು.
ವಿನಾಯಕ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಅಲಂಕರಿಸಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವೀರಗಾಸೆ ಕುಣಿತ, ಪೂಜೆ ಕುಣಿತದೊಂದಿಗೆ ದೇವಸ್ಥಾನದಿಂದ ಹೊರಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಂತರ ಬಸಾಪುರ ಗ್ರಾಮದಲ್ಲಿರುವ ಕಲ್ಯಾಣಿಗೆ ವಿಸರ್ಜಿಸಲಾಯಿತು.
ಎಚ್.ಎಂ.ಶಿವಕುಮಾರ್, ಮಹೇಂದ್ರ, ನಾಗೇಂದ್ರ, ಅಶೋಕ, ಶಿವು, ವಿದ್ಯಾಶಂಕರ, ನವೀನ, ಅಕ್ಕಿ ಬಾಬು, ರಾಜು, ಅಭಿ, ಕಿರಣ, ಸೂರ್ಯ ಪ್ರಕಾಶ್, ಕಾರ್ತಿಕ್, ಜಗದೀಶ, ಮನೋಜ್ ಇತರರು ಇದ್ದರು.