ಪಾಂಡವಪುರ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ಆಯೋಜಿಸಿದ್ದ 46ನೇ ವರ್ಷದ ಗಣಪತಿ ಪೂಜಾ ಮಹೋತ್ಸವದಲ್ಲಿ ****ಜೆಡಿಎಸ್ ಯುವ ನಾಯಕ ಸಿ.ಪಿ.ಶಿವರಾಜು ಭಾಗವಹಿಸಿ ಪೂಜೆ ಸಲ್ಲಿಸಿದರು.
- 48 ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಪಾಂಡವಪುರ: ಗಣೇಶ ಹಬ್ಬದ ಪ್ರಯುಕ್ತವಾಗಿ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸೋಮವಾರ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ 46ನೇ ವರ್ಷದ ಗಣಪತಿ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಕಳೆದ 46 ವರ್ಷಗಳಿಂದಲೂ ಆಯೋಜಿಸುತ್ತಿರುವ ಗಣೇಶೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಕ್ತರು, ಸಾರ್ವಜನಿಕರು ಭಾಗವಹಿಸಿ ಭಕ್ತಿಭಾವ ಪ್ರದರ್ಶಿಸಿದರು.
48 ದಿನಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ನಿತ್ಯ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ರಂಗೋಲಿ ಸ್ಪರ್ಧೆ, ಹೋಮಹವನ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಕಣ್ಣಿನ ತಪಾಸಣೆ ಶಿಬಿರ, ಹರಿಕಥೆ, ಜನಪದಗೀತೆ, ಯೋಗ, ರಸಮಂಜರಿ, ಭರತನಾಟ್ಯ, ಜನಪದ-ಭಾವಗೀತೆ, ಗಹನ ಸಂಗೀತ, ತತ್ವಪದಗಳು, ವಿವಿಧ ವೇಷಭೂಷಣ ಸ್ಪರ್ಧೆ, ರಸಮಂಜರಿ ಕಾರ್ಯಕ್ರಮ, ಚಲನಚಿತ್ರ ಪ್ರದರ್ಶನ ,ಮ್ಯಾಜಿಕ್ ಶೋ ಮತ್ತು ಮಾತನಾಡುವ ಬೊಂಬೆ, ವೀಣಾವದನ ಹಾಗೂ ಗುರುವಂದನಾ ಕಾರ್ಯಕ್ರಮ, ಅನ್ನ ಸಂತಪರ್ಣೆ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಯುವ ನಾಯಕ ಸಿ.ಪಿ.ಶಿವರಾಜು ಮಾತನಾಡಿ, 48 ದಿನಗಳ ಕಾಲ ಗಣೇಶ ಪೂಜಾ ಕಾರ್ಯಕ್ರಮ ನಡೆಯಲಿದ್ದು, ನಿತ್ಯವು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ, ಗಣೇಶೋತ್ಸವ ನೇತೃತ್ವದಲ್ಲಿ ವಹಿಸಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದರು ಹಾರೈಸಿದರು.