ಮಂಡ್ಯ ನಗರದ ಐಡಿಯಲ್ ಮಾಂಟೇಸರಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
- ನಗರದ ಐಡಿಯಲ್ ಮಾಂಟೇಸರಿಯಲ್ಲಿ ವಾರ್ಷಿಕೋತ್ಸವ
- ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಮಂಡ್ಯ: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೇಳುವಂತೆ ಮಕ್ಕಳು ಮನುಷ್ಯರಾಗಿ ಇನ್ನೊಬ್ಬರೊಂದಿಗೆ ಗೌರವ, ಘನತೆಯಿಂದ ವರ್ತಿಸುವುದೇ ನಿಜವಾದ ಶಿಕ್ಷಣ ಎಂದು ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ತಿಳಿಸಿದರು.
ನಗರದ ಐಡಿಯಲ್ ಮಾಂಟೇಸರಿ ಹಾಗೂ ನರ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಐಡಿಯಲ್ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಮನೆಯಲ್ಲಿದ್ದಾಗ ತುಂಟಾಟವಾಡುತ್ತಾರೆ. ಆದರೆ ಶಾಲೆಗೆ ಬಂದ ನಂತರ ಶಿಸ್ತು ಕಲಿಯುತ್ತಾರೆ. ವಿದ್ಯೆಯನ್ನು ಕಲಿತು ಎಲ್ಲ ಬಂಧನದಿಂದ ಮುಕ್ತಿ ಹೊಂದುವುದು ಶಿಕ್ಷಣ. ಮಗುವನ್ನು ವಿದ್ಯಾವಂತನಾಗಿ ಮಾಡುವುದು ಸಂಸ್ಕೃತಿಯಾಗಿದೆ ಎಂದರು.
ಐಡಿಯಲ್ ಮಾಂಟೇಸರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಪ್ರಾಂಶುಪಾಲೆ ಶಶಿಕಲಾ ಇತರರಿದ್ದರು.