ಪಾಂಡವಪುರದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹಣ್ಣುಹಂಪಲು ವಿತರಣೆ ಮಾಡಿದರು. ಶ್ರೀಕಾಂತ್, ಭರತ್‌ಪಟೇಲ್, ಚಂದ್ರಶೇಖರ್, ಕೆ.ಕುಬೇರ, ಪಟೇಲ್ ರಮೇಶ್,ಸಿದ್ದಲಿಂಗಯ್ಯ ಇತರರಿದ್ದರು. 
ಮಂಡ್ಯ

ಕಾಂಗ್ರೆಸ್‌ನಿಂದ ಉತ್ತಮ ಆಡಳಿತ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • * ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಶ್ರೀಕಾಂತ್ ಹೇಳಿಕೆ
ಪಾಂಡವಪುರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬ ಅಂಗವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದರು.
ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ನ ಕಟ್ಟಾಳು. ಪಕ್ಷ ಸಂಘಟನೆಯಲ್ಲಿ ಚತುರತೆ ಹೊಂದಿದ್ದಾರೆ. ಇವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಳ್ಳೆಯ ಆಡಳಿತ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಡಿಕೆಶಿ ಮುಖ್ಯಮಂತ್ರಿಯಾಗಲು ತಾಯಿ ಚಾಮುಂಡೇಶ್ವರಿ ಆಶೀರ್ವದಿಸಲಿ ಎಂದರು.
ಯುವ ಘಟಕದ ಅಧ್ಯಕ್ಷ ಭರತ್‌ಪಟೇಲ್, ಚಂದ್ರಶೇಖರ್, ಮುಖಂಡರಾದ ಕೆ.ಕುಬೇರ, ಪಟೇಲ್ ರಮೇಶ್,ಸಿದ್ದಲಿಂಗಯ್ಯ, ಉಮಾಶಂಕರ್, ಮೋಹನ್, ಪಾಪು, ಕೃಷ್ಣೇಗೌಡ, ಬಿ.ಜೆ.ಸ್ವಾಮಿ, ದೊಡ್ಡವೆಂಕಟಯ್ಯ, ಚಿಕ್ಕಣ್ಣ, ಶಿವರಾಮು, ಹೊನ್ನರಾಜು ಇತರರಿದ್ದರು.