ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ರಾಮಾನುಜಾಚಾರ್ಯರು ನೇಮಿಸಿದ ಪದ್ಧತಿಯಂತೆ ಮಹಾರಥೋತ್ಸವ ನಡೆದ ಮಂಗಳವಾರ ರಾತ್ರಿ ಹರಿಜನರ ಸೇವೆಯಾದ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವವನ್ನು ಹರಿಜನರು ಶ್ರದ್ಧಾಭಕ್ತಿಂದ ನೆರವೇರಿಸಿದರು.  
ಮಂಡ್ಯ

ಮೇಲುಕೋಟೆಯಲ್ಲಿ ಬಂಗಾರದ ಪಲ್ಲಕ್ಕಿ ಉತ್ಸವ

ಮೇಲುಕೋಟೆ: ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ರಾಮಾನುಜಾಚಾರ್ಯರು ನೇಮಿಸಿದ ಪದ್ಧತಿಯಂತೆ ಮಹಾರಥೋತ್ಸವ ನಡೆದ ಮಂಗಳವಾರ ರಾತ್ರಿ ಹರಿಜನರ ಸೇವೆಯಾದ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವವನ್ನು ಹರಿಜನರು ಶ್ರದ್ಧಾಭಕ್ತಿಂದ ನೆರವೇರಿಸಿದರು.
ಆಚಾರ್ಯರಾಮಾನುಜಾಚಾರ್ಯರು ಅಂದಿನ ಬಿಗಿಯಾದ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಬ್ರಹ್ಮೋತ್ಸವದ ಕಾಲದಲ್ಲಿ ತೇರು, ತೆಪ್ಪ, ತೀರ್ಥಗಳಂದು ಚೆಲುವನಾರಾಯಣಸ್ವಾಮಿ ದೇವಾಲಯ ಮುಕ್ತಪ್ರವೇಶ ಹಾಗೂ ಸೇವೆಗೆ ಅವಕಾಶ ಕಲ್ಪಿಸಿದ್ದರು. ಪ್ರಮುಖವಾಗಿ ಮಹಾರಥೋತ್ಸವದ ರಾತ್ರಿ ಬಂಗಾರದ ಪಲ್ಲಕ್ಕಿ ನಡೆಸುವ ಅವಕಾಶ ನೀಡಿದ್ದು, ಮೈಸೂರಿನ ಅಶೋಕಪುರಂನ ಕಾಳಿಕಾಂಬ ಟ್ರಸ್ಟ್ ದಲಿತರ ಪರವಾಗಿ ಪ್ರತಿವರ್ಷ ಉತ್ಸವ ನಡೆಸುತ್ತಾ ಬಂದಿದ್ದು, ಈ ವರ್ಷವೂ ಅದ್ದೂರಿಯಾಗಿ ನೆರವೇರಿತು. ದಲಿತರ ವಿಶೇಷ ಮಂಗಳವಾಧ್ಯಗಳೊಂದಿಗೆ ರಾತ್ರಿ 9.15ರವೇಳೆಗೆ ಆರಂಭವಾದ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವ ರಾತ್ರಿ 12 ಗಂಟೆಯವೇಳೆಗೆ ಮುಕ್ತಾಯವಾಯಿತು.
ಬಂಗಾರದ ಪಲ್ಲಕ್ಕಿ ಉತ್ಸವದಲ್ಲಿ ದಲಿತ ಮುಖಂಡ, ಕಾಳಿಕಾಂಬ ಟ್ರಸ್ಟ್ ಗೌರವಾಧ್ಯಕ್ಷ ವೆಂಕಟರಾಮು, ಮೈಸೂರಿನ ಮಾಜಿ ಮೇಯರ್, ಅಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಎಂ.ಚಂದ್ರಶೇಖರ್, ಸಹಕಾರ್ಯದರ್ಶಿ ಸೋಮಣ್ಣ ಗುಂಡಪ್ಪ, ಸಹಕಾರ್ಯದರ್ಶಿ ಆರ್.ಸಿ.ಮಹೇಶ್ ಇತರರು ಇದ್ದರು.