-ಕೆ.ಎಂ.ದೊಡ್ಡಿಯ ವಿಶ್ವಮಾನವ ರಂಗಭೂಮಿ ಕಲಾವಿದರ ಸೇವಾಟ್ರಸ್ಟ್ ಆಯೋಜಿಸಿದ್ದ 8ನೇ ವರ್ಷದ ಸಂಘದ ವಾರ್ಷಿಕೋತ್ಸವ, ರಂಗ ನಿರ್ದೇಶಕ ದೇವರಾಜು ಅವರಿಗೆ ಬಂಗಾರದ ಕಡಗ ಸಮರ್ಪಣಾ ಕಾರ್ಯಕ್ರಮ ಜರುಗಿತು.
ಕೆ.ಎಂ.ದೊಡ್ಡಿ: ಶಿಕ್ಷಕ ವೃತ್ತಿಯ ಜತೆಗೆ ರಂಗ ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿ ಕಲಾ ಪ್ರೇಕ್ಷಕರಿಂದ ಮನ್ನಣೆ ಗಳಿಸಿದವರು ರಂಗ ನಿರ್ದೇಶಕ ಕೆ.ಪಿ.ದೊಡ್ಡಿ ದೇವರಾಜು ಅವರಿಗೆ ಬಂಗಾರದ ಕಡಗ ಸಮರ್ಪಣೆ ನಿಜಕ್ಕೂ ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಶ್ಲಾಘನೆ ವ್ಯಕ್ತಪಡಿಸಿದರು.
ವಿಶ್ವಮಾನವ ರಂಗಭೂಮಿ ಕಲಾವಿದರ ಸೇವಾಟ್ರಸ್ಟ್ ಆಯೋಜಿಸಿದ್ದ 8ನೇ ವರ್ಷದ ಸಂಘದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಶಿಕ್ಷಕ ಹಾಗೂ ರಂಗನಿರ್ದೇಶಕ ದೇವರಾಜು ಅವರಿಗೆ ಬಂಗಾರದ ಕಡಗ ಸಮರ್ಪಣಾ ಕಾರ್ಯಕ್ರಮದಲ್ಲಿ ನಾಲ್ಕು ದಿನಗಳ ಸಾಮಾಜಿಕ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಪೂರ್ವಿಕರ ಕಾಲದಲ್ಲಿ ಶಿಕ್ಷಣದ ಕೊರತೆ ಎದುರಾಗಿದ್ದ ವೇಳೆ ನಾಟಕಗಳ ಮೂಲಕ ಇತಿಹಾಸವನ್ನು ತಿಳಿಸುತ್ತಾ ಒಳಿತು ಕೆಡಕುಗಳನ್ನು ಕಲಾವಿದರು ತಿಳಿಸಿಕೊಡುತ್ತಿದ್ದರು ಎಂದರು.
ಗ್ರಾಮೀಣ ನಾಟಕಗಳು ಹುಟ್ಟಿದ್ದು ಶ್ರೀಮಂತರ ಮನೆಯಿಂದಲ್ಲ. ಕಡು ಬಡವರ ನಡುವಿನಿಂದ ಹುಟ್ಟಿ ಬಂದಿದೆ. ಸದಾ ಒತ್ತಡದ ನಡುವೆ ಜೀವನ ನಡೆಸುತ್ತಿರುವ ಹಳ್ಳಿಗರು ಸಾಮಾಜಿಕ, ಪೌರಾಣಿಕ ನಾಟಕಗಳನ್ನು ವೀಕ್ಷಿಸುವ ಮೂಲಕ ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳುತ್ತಿದ್ದರು. ಹಗಲಿನ ಪ್ರದರ್ಶನ ಮಾಡುವುದನ್ನು ಕಡಿಮೆಗೊಳಿಸಿ ರಾತ್ರಿ ಪ್ರದರ್ಶನ ಮಾಡಿದರೆ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ನಾಟಕಗಳನ್ನು ಜನರು ವೀಕ್ಷಣೆ ಮಾಡಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.
ಇದೇ ವೇಳೆ ರಂಗ ನಿರ್ದೇಶಕ ಎಸ್.ದೇವರಾಜು ಅವರಿಗೆ ಬಂಗಾರದ ಕಡಗ ತೊಡಿಸಲಾಯಿತು. ಬಿದರಹೊಸಹಳ್ಳಿ ಹನುಮೇಶ್, ದಿವ್ಯಾ ರಾಮಚಂದ್ರಶೆಟ್ಟಿ, ಕೆ.ಎನ್.ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ವಿ.ದೇವರಾಜು, ರಂಗಭೂಮಿ ಕಲಾವಿದರ ಸಂಘದ ಹೋಬಳಿ ಘಟಕದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಗ್ರಾಪಂ ಸದಸ್ಯ ಕೆ.ಪಿ.ದೊಡ್ಡಿ ಸಿದ್ದರಾಜು, ಮುಖಂಡರಾದ ಕೆ.ಟಿ.ಸುರೇಶ್, ಚಾಮನಹಳ್ಳಿ ಮಂಜು, ಪೊಲೀಸ್ ಸಿದ್ದರಾಜು, ಅಣ್ಣೂರು ವಿನಯ್, ತಿಪ್ಪೂರು ಕೃಷ್ಣ ,ಮಹೇಶ್, ಕೆ.ಎನ್.ರಘು ಬೂಸಿಗೌಡ, ವೆಂಕಟೇಶ್, ನವೀನ್, ರಾಜೇಶ್, ರವಿ, ವೇಣುಗೋಪಾಲ್, ಬಿ.ಟಿ.ಯೋಗೇಶ್,ಬಿ.ಎಂ.ಶ್ರೀಧರ್, ಚಂದ್ರಶೇಖರ್, ಅಶ್ವಥ್, ಬಿ.ಜಿ.ವೆಂಕಟೇಶ್, ಆನಂದ್, ಸತೀಶ್, ಮಂಜು, ಸಿದ್ದರಾಜು, ಅಂಕೇಗೌಡ, ಸಂತೋಷ್ ಇದ್ದರು.