ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿನ ಮಮತೆಯ ಮಡಿಲು ನಿತ್ಯ ಅನ್ನ ದಾಸೋಹ ಕೇಂದ್ರದಲ್ಲಿ ಭಗವಾನ್ ಗೌತಮ ಬುದ್ಧರ ಜಯಂತ್ಯುತ್ಸವ ಆಚರಿಸಲಾಯಿತು. 
ಮಂಡ್ಯ

ಕರುಣೆ ಬೋಧಿಸಿದ ಮಹಾನ್ ತ್ಯಾಗಿ: ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ನಾಗಾನಂದ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿ ಆಚರಣೆ
  • ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಮಂಗಲ ವತಿಯಿಂದ ಆಯೋಜನೆ
ಮಂಡ್ಯ: ಗೌತಮ ಬುದ್ಧರು ವಿಶ್ವಕ್ಕೆ ಶಾಂತಿ, ಅಹಿಂಸೆ, ಕರುಣೆ ಬೋಧಿಸಿದ ಮಹಾನ್ ತ್ಯಾಗಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ನಾಗಾನಂದ ಬಣ್ಣಿಸಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿನ ಮಮತೆಯ ಮಡಿಲು ನಿತ್ಯ ಅನ್ನ ದಾಸೋಹ ಕೇಂದ್ರದಲ್ಲಿ ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಮಂಗಲ ವತಿಯಿಂದ ಏರ್ಪಡಿಸಿದ್ದ ಭಗವಾನ್ ಗೌತಮ ಬುದ್ಧರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಗೌತಮ ಬುದ್ಧರ ಜಯಂತಿಯನ್ನು ಆಚರಣೆ ಮಾಡುತ್ತಿದ್ದಾರೆ. ರಾಜನಾಗಿ ಮೆರೆಯಬೇಕಾದ ಗೌತಮ ಬುದ್ಧರು ಎಲ್ಲವನ್ನು ಬಿಟ್ಟು ಕಾಡಿಗೆ ಬಂದು ಊಟ ಮಾಡಲು ಸಾಧ್ಯವಾಗದೆ, ಅವಮಾನ ಮಾಡಿದರು ಕೂಡ ಜಗ್ಗದೆ ಜ್ಞಾನೋದಯ ಪಡೆದು ವಿಶ್ವಕ್ಕೆ ಅಹಿಂಸೆ ಬೋಧನೆ ಮಾಡಿದವರು ಎಂದು ತಿಳಿಸಿದರು.
ಮನುಷ್ಯನ ದುಃಖಕ್ಕೆ ಅತಿಯಾದ ಆಸೆ ಕಾರಣ ಎಂದು ಗೌತಮ ಬುದ್ಧರು ಸಂದೇಶ ಕೊಟ್ಟವರು. ಎರಡು ಸಾವಿರ ವರ್ಷಕ್ಕೆ ಮುಂಚೆ ಗೌತಮ ಬುದ್ಧರು ವಿಶ್ವಕ್ಕೆ ದೊಡ್ಡ ಸಂದೇಶ ಸಾರಿದವರು. ಅವರ ಜಯಂತಿ ಅಂಗವಾಗಿ ಬುದ್ಧನ ಹೆಸರಿನಲ್ಲಿ ಎಲ್ಲ ಕಡೆ ಅನ್ನದಾಸೋಹ ಮಾಡುವ ಮೂಲಕ ಪ್ರಾಣಿ ಪಕ್ಷಿಗಳಿಗೂ ಸಹ ಆಹಾರ ಸಿಗುತ್ತಿದೆ ಎಂದು ತಿಳಿಸಿದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಗೌತಮ ಬುದ್ಧರು ಪಂಚಶೀಲ ತತ್ವಗಳ ಮೂಲಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದರು. ಜಗತ್ತಿಗೆ ಮಾನವತಾವಾದಿ ಸಂದೇಶವನ್ನು ಸಾರಿದ ಭಗವಾನ್ ಬುದ್ಧರ ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ನಮ್ಮ ಯುವ ಪೀಳಿಗೆಯವರು ಪಾಲಿಸು ವಂತಾಗಬೇಕು ಎಂದು ಹೇಳಿದರು.
ಮಿಮ್ಸ್ ರಕ್ತನಿಧಿ ಕೇಂದ್ರದ ರಫೀಕ್ ಅಹಮದ್, ನರ್ಸಿಂಗ್ ಅಧೀಕ್ಷಕಿ ತುಳಸಿ, ವಿಶ್ರಾಂತ ಪ್ರಾಧ್ಯಾಪಕ ಶಿವಣ್ಣ ಇತರರಿದ್ದರು.