ಜೂಜಾಟದಲ್ಲಿ ತೊಡಗಿದ್ದ 20 ಮಂದಿ ಜೂಜುಕೋರರನ್ನು ಗುರುವಾರ ಬಂಧಿಸಿದ ಹಲಗೂರು ಪೊಲೀಸರು, 40 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಹಲಗೂರು: ವಿವಿಧ ಕಡೆ ಜೂಜಾಟದಲ್ಲಿ ತೊಡಗಿದ್ದ 20 ಮಂದಿ ಜೂಜುಕೋರರನ್ನು ಗುರುವಾರ ಬಂಧಿಸಿದ ಹಲಗೂರು ಪೊಲೀಸರು, 40 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಹಲಗೂರು ಸಮೀಪದ ಧನಗೂರು ಕುರಿಫಾರಂ ಗ್ರಾಮದ ಹೊರ ವಲಯದಲ್ಲಿರುವ ರೇಷ್ಮೆ ಸಾಕಣೆ ಮನೆಯಲ್ಲಿ ಜೂಜಾಟದಲ್ಲಿ ತೊಡಗಿದ್ದ 7 ಮಂದಿಯನ್ನು ಬಂಧಿಸಿ 12 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ಸಮೀಪದ ವಿ.ಬಸಾಪುರದಲ್ಲಿ ಜೂಜಾಟದಲ್ಲಿ ತೊಡಗಿದ್ದ 3 ಮಂದಿ ಜೂಜುಕೋರರನ್ನು ಬಂಧಿಸಿದ್ದು, ಆರೋಪಿಗಳಿಂದ 19 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಹಲಗೂರಿನ ವಾಜರಗೇರಿ ಕೇಶವಮೂರ್ತಿ ಅವರ ಮನೆಯ ಟೇರೆಸ್ ಮೇಲೆ ಜೂಜಾಟದಲ್ಲಿ ತೊಡಗಿದ್ದ 10 ಜೂಜುಕೋರರನ್ನು ಬಂಧಿಸಿದ್ದು, 9 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ.
ಗಸ್ತಿನಲ್ಲಿದ್ದಾಗ ಖಚಿತ ಮಾಹಿತಿ ಅಧರಿಸಿದ ಹಲಗೂರು ಪಿಎಸ್‌ಐ ಲೋಕೇಶ್, ಸಿಬ್ಬಂದಿ ದಾಳಿ ಮಾಡಿದ್ದು, ಜೂಜುಕೋರರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.